12
June, 2026

A News 365Times Venture

12
Friday
June, 2026

A News 365Times Venture

ಹೈಕಮಾಂಡ್ ನಿಂದ ಸಕಾರಾತ್ಮಕ ಸ್ಪಂದನೆ: ಖಂಡಿತ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ- ‘ಕೈ’ ಶಾಸಕ

Date:

ಬೆಂಗಳೂರು,ಜೂನ್,11,2026 (www.justkannada.in):  ಹೈಕಮಾಂಡ್ ನಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಹೀಗಾಗಿ ಖಂಡಿತ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಶಾಸಕ ನಾರಾಯಣಸ್ವಾಮಿ, ಮೂರು ಜಿಲ್ಲೆಗಳಲ್ಲಿ ಹಿರಿಯರು ಸಮುದಾಯದ ಮುಖಂಡರಿಂದ ಒತ್ತಾಯ ಮಾಡಲಾಗುತ್ತಿದೆ.  ಜಿಲ್ಲೆಯ ಶಾಸಕರು ನನ್ನ ಮಂತ್ರಿ ಮಾಡಬೇಕೆಂದು ಮನವಿ ಮಾಡಿದ್ದಾರೆ.  ಹೈಕಮಾಂಢ್ ನಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಸಿಎಂ ಡಿಸಿಎಂ ಅಭಿನಂದನೆ ಸಲ್ಲಿಸಲು ದೆಹಲಿಗೆ ಹೋಗಿದ್ದಾರೆ.  ಏನೇ ಇದ್ದರೂ ಜೂನ್ 18ರ ಬಳಿಕ ಆಗುತ್ತದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ  ಸಿಎಂ,  ಡಿಸಿಎಂ ಸೇರಿ 2ನೇ ಪಟ್ಟಿ ಬಗ್ಗೆ ತೀರ್ಮಾನ ಮಾಡುತ್ತಾರೆ.  ಇವತ್ತು ಏನು ಫೈನಲ್ ಆಗಲ್ಲ ಅಂತ ಅನಿಸುತ್ತೆ ಎಂದು ನಾರಾಯಣಸ್ವಾಮಿ ತಿಳಿಸಿದರು.

2019ರಲ್ಲಿ ನನಗೆ ಬಿಜೆಪಿಯಿಂಧ ಆಫರ್ ಬಂದಿತ್ತು

2019ರಲ್ಲಿ ನನಗೆ ಬಿಜೆಪಿಯಿಂಧ ಆಫರ್ ಬಂದಿತ್ತು.  ಬಿಜೆಪಿಗೆ ಬನ್ನಿ ನಿಮ್ಮನ್ನ ಮಂತ್ರಿ ಮಾಡುತ್ತೇವೆ ಎಂದು ಆಫರ್ ಇತ್ತು.  ಅವತ್ತು ಕೂಡ ನಾವು ಯಾರೂ ಬಿಜೆಪಿಗೆ ಹೋಗಲಿಲ್ಲ.  ಪಕ್ಷಕ್ಕಾಗಿ  30 ವರ್ಷ ದುಡಿದಿದ್ದೇವೆ.  ಕೂಲಿ ಕೇಳಿವುದರಲ್ಲಿ ತಪ್ಪಿಲ್ಲ.  ಅದ್ದರಿಂದ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಶಾಸಕ ನಾರಾಯಣಸ್ವಾಮಿ ತಿಳಿಸಿದರು.

Key words:  high command, ministerial position , Congress, MLA

The post ಹೈಕಮಾಂಡ್ ನಿಂದ ಸಕಾರಾತ್ಮಕ ಸ್ಪಂದನೆ: ಖಂಡಿತ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ- ‘ಕೈ’ ಶಾಸಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗ್ಯಾರಂಟಿ ಬಂದ್ ಗೆ ಹುನ್ನಾರ: ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ. ಬಂದಿಲ್ಲ- ಶ್ರೀರಾಮುಲು

 ಬೆಂಗಳೂರು,ಜೂನ್,12,2026 (www.justkannada.in):  ಗ್ಯಾರಂಟಿ ಯೋಜನೆಗಳನ್ನ ಪರಿಷ್ಕರಣೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ...

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ: ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಿಎಂ ವಿಜಯ್

ಉಡುಪಿ,ಜೂನ್,12,2026 (www.justkannada.in):  ತಮಿಳುನಾಡಿನ ಸಿಎಂ ವಿಜಯ್ ಇಂದು ಉಡುಪಿ ಜಿಲ್ಲೆ ಬೈಂದೂರು...

ಬಿಡದಿ ಟೌನ್​ ಶಿಪ್​​​ ಗೆ​ ಅಂತಿಮ ಅಧಿಸೂಚನೆ ಪ್ರಕಟಿಸಿದ ಸರ್ಕಾರ

ಬೆಂಗಳೂರು, ಜೂನ್, 12,2026 (www.justkannada.in): ರಾಜ್ಯ ಸರ್ಕಾರವು  ಬಿಡದಿ ಟೌನ್ ಶಿಪ್‌...

ಬಿಡದಿ ಟೌನ್ ಶಿಪ್ ಗೆ ಅಧಿಸೂಚನೆ: ಸರ್ಕಾರದ ವಿರುದ್ದ ಕೇಂದ್ರ ಸಚಿವ HDK ಕಿಡಿ

ಬೆಂಗಳೂರು,ಜೂನ್,12,2026 (www.justkannada.in):  ಬಿಡದಿ ಟೌನ್ ಶಿಪ್ ಗೆ ಇದೀಗ ಸರ್ಕಾರ ಅಂತಿಮ...