ಬೆಂಗಳೂರು,ಏಪ್ರಿಲ್,11,2026 (www.justkannada.in): ದಾವಣಗೆರೆ ದಕ್ಷಿಣ ಉಪಚುನಾವಣೆ ಕ್ಷೇತ್ರದಲ್ಲಿ ಪಕ್ಷದವರಿಂದಲೇ ಷಡ್ಯಂತ್ರ ಆರೋಪ ಕುರಿತು ಮಾಜಿ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿ.ಕೆ ಸುರೇಶ್, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಒಟ್ಟಾರೆಯಾಗಿ ಉತ್ತಮ ಫಲಿತಾಂಶ ಬರುತ್ತೆ. ಆರೋಪ ಪ್ರತ್ಯಾರೋಪ ಸಹಜ. ಪಕ್ಷ ಎಲ್ಲವನ್ನೂ ಗಮನಿಸುತ್ತೆ. ಸಮರ್ಥ್ ಶಾಮನೂರು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ತಮಿಳುನಾಡು ಚುನಾವಣೆಗೆ ರಾಜ್ಯದ ನಾಯಕರಿಗೆ ಜವಾಬ್ದಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ಏನು ಜವಾಬ್ದಾರಿ ಕೊಡುತ್ತಾರೋ ಅದರಂತೆ ಕೆಲಸ ಮಾಡುತ್ತೇವೆ. ಇಂಡಿಯಾ ಮೈತ್ರಿಕೂಟ ಪರವಾಗಿ ನಾವು ಕೆಲಸ ಮಾಡುತ್ತೇವೆ. ನನಗೆ ಏನು ಜವಾಬ್ದಾರಿ ಕೊಡುತ್ತಾರೋ ಅದನ್ನ ಪಾಲಿಸುತ್ತೇವೆ ಎಂದರು.
ಶಾಸಕರು ದೆಹಲಿಗೆ ತೆರಳುವ ಬಗ್ಗೆ ನನಗೆ ಗೊತ್ತಿಲ್ಲ. ಬೇರೆಯವರಿಗೆ ಏನೋ ಮಾಹಿತಿ ಇರಬಹುದು. ಅದರೆ ನನಗೆ ಗೊತ್ತಿಲ್ಲ ಎಂದು ಡಿ.ಕೆ ಸುರೇಶ್ ತಿಳಿಸಿದರು.
Key words: Samarth Shamanur, will win, D.K. Suresh
The post ಆರೋಪ ಪ್ರತ್ಯಾರೋಪ ಸಹಜ: ಸಮರ್ಥ್ ಶಾಮನೂರು ಗೆಲ್ತಾರೆ-ಡಿ.ಕೆ ಸುರೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




