26
September, 2026

A News 365Times Venture

26
Saturday
September, 2026

A News 365Times Venture

ಎಸ್‌ಬಿಐ ಚೀಫ್ ಮ್ಯಾನೇಜರ್‌ಗೆ 1 ವರ್ಷ ಕಠಿಣ ಕಾರಾಗೃಹ, ₹50 ಸಾವಿರ ದಂಡ

Date:

 

ಮೈಸೂರು, ಸೆ.26, 2026: ಮೃತ ಗ್ರಾಹಕರ ಖಾತೆ ಹಾಗೂ ಬ್ಯಾಂಕ್‌ನ ಆಂತರಿಕ ಖಾತೆಯಿಂದ ಒಟ್ಟು ₹61.57 ಲಕ್ಷ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಎಸ್‌ಬಿಐನ ಮಾಜಿ ಚೀಫ್ ಮ್ಯಾನೇಜರ್‌ಗೆ ಮೈಸೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಮೈಸೂರಿನ ಚಾಮುಂಡಿಪುರಂ ಎಸ್‌ಬಿಐ ಶಾಖೆಯಲ್ಲಿ ಚೀಫ್ ಮ್ಯಾನೇಜರ್ ಆಗಿದ್ದ ಎ.ವಿ. ಕುಲಕರ್ಣಿ @ ಅನಿರುದ್ಧ ವಸಂತರಾವ್ ಕುಲಕರ್ಣಿ ಶಿಕ್ಷೆಗೆ ಗುರಿಯಾದವರು.

2009ರ ಮೇ 13ರಿಂದ 2011ರ ಡಿಸೆಂಬರ್ 23ರ ಅವಧಿಯಲ್ಲಿ, 2005ರ ಏಪ್ರಿಲ್ 7ರಂದು ಮೃತಪಟ್ಟಿದ್ದ ಗ್ರಾಹಕ ಕೃಷ್ಣ ಅಯ್ಯರ್ ಅವರ ಖಾತೆಯಿಂದ ₹40.53 ಲಕ್ಷ ಹಾಗೂ ಬ್ಯಾಂಕ್‌ನ ಆಂತರಿಕ ಖಾತೆಯಿಂದ ₹21.04 ಲಕ್ಷ ಸೇರಿದಂತೆ ಒಟ್ಟು ₹61.57 ಲಕ್ಷ ಹಣವನ್ನು ಆರೋಪಿಯು ತನ್ನ ಹಾಗೂ ತನ್ನ ಪುತ್ರನ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಡ್ರಾ ಮಾಡಿಕೊಂಡಿದ್ದರು ಎಂದು ಪ್ರಕರಣದಲ್ಲಿ ಆರೋಪಿಸಲಾಗಿತ್ತು.

ಬ್ಯಾಂಕ್‌ನ ಮೇಲಾಧಿಕಾರಿಗಳ ವಿಚಾರಣೆಯಲ್ಲಿ ಹಣದ ದುರುಪಯೋಗ ಬೆಳಕಿಗೆ ಬಂದಿದ್ದು, ಆರೋಪಿ ಅಕ್ರಮವಾಗಿ ಹಣ ಡ್ರಾ ಮಾಡಿಕೊಂಡಿರುವುದನ್ನು ಒಪ್ಪಿಕೊಂಡು ಸುಮಾರು ₹62 ಲಕ್ಷವನ್ನು ಬ್ಯಾಂಕ್‌ಗೆ ಮರುಪಾವತಿಸಿದ್ದರು.

ಈ ಸಂಬಂಧ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಉಪನಿರೀಕ್ಷಕ ಪ್ರಶಾಂತ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು C.C. No.360/2013ರಂತೆ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 1ನೇ ಹೆಚ್ಚುವರಿ ಸಿಜೆ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್.ವಿ. ಅವರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಸೆ.25, 2026ರಂದು ತೀರ್ಪು ಪ್ರಕಟಿಸಿದರು.

KEY WORDS:

SBI Chief Manager, fraud case, A.V. Kulkarni, Aniruddha Vasantrao Kulkarni, ₹61.57 lakh, SBI fraud, Mysuru SBI, Chamundipuram branch, Former SBI manager, sentenced Mysuru court,

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜ್ಞಾನೇಶ್‌ ಕುಮಾರ್‌ ಬರುವ ಮುಂಚೆಯೂ ಕಾಂಗ್ರೆಸ್‌ ಸೋಲುತ್ತಿದ್ರು – ಶಾಸಕ ಸುರೇಶ್‌ ಕುಮಾರ್‌ ಟಾಂಗ್‌

ಬೆಂಗಳೂರು,ಸೆಪ್ಟಂಬರ್‌,26,2026 (www.justkannada.in): ಕೇಂದ್ರ ಮುಖ್ಯ ಚುನಾವಣಾ ಆಯುಕ್ತ  ಜ್ಞಾನೇಶ್ ಕುಮಾರ್ ಅವರ...

ನಂದಿನಿ ಹಾಲಿನ ದರ ಏರಿಕೆ ವಿಚಾರ: ಇಂದು ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಅಂತಿಮ ನಿರ್ಧಾರ

ಬೆಂಗಳೂರು,ಸೆಪ್ಟಂಬರ್‌,26,2026 (www.justkannada.in) ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ೧೦ ರೂ ಹೆಚ್ಚಳ...

ರಾಜ್ಯಪಾಲರಿಂದ ಪ್ರೊ. ಜಿ. ಹೇಮಂತ ಕುಮಾರ್ ಅವರ ಎರಡು ಕೃತಿಗಳ ಲೋಕಾರ್ಪಣೆ

  ಮೈಸೂರು,SEP.25,2026: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಜಿ. ಹೇಮಂತ ಕುಮಾರ್...

CPC ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆಗಳು ಆರಂಭ.

​ಬೆಂಗಳೂರು, ಸೆಪ್ಟೆಂಬರ್, 25,2026 (www.justkannada.in):  ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್...