6
October, 2026

A News 365Times Venture

6
Tuesday
October, 2026

A News 365Times Venture

ಕರ್ನಾಟಕ ಪಿಕಲ್‌ ಬಾಲ್ ಪ್ರೀಮಿಯರ್ ಲೀಗ್ (KPPL): ಜೆರ್ಸಿ ಅನಾವರಣ

Date:

ಬೆಂಗಳೂರು, ಅಕ್ಟೋಬರ್,6,2026 (www.justkannada.in): ಕರ್ನಾಟಕ ಸ್ಟೇಟ್ ಪಿಕಲ್‌ ಬಾಲ್ ಅಸೋಸಿಯೇಷನ್ (KSPA) ಮತ್ತು ಎಂಟ್ರೋಪಿ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ (ESE) ಸಹಯೋಗದಲ್ಲಿ ನಡೆಯುತ್ತಿರುವ ಪ್ರಥಮ ಆವೃತ್ತಿಯ ‘ಕರ್ನಾಟಕ ಪಿಕಲ್‌ ಬಾಲ್ ಪ್ರೀಮಿಯರ್ ಲೀಗ್’ (KPPL) ಟೂರ್ನಿಯ ಅಧಿಕೃತ ಜೆರ್ಸಿ ಬಿಡುಗಡೆ ಸಮಾರಂಭವು ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್‌ ಸಿಟಿಯಲ್ಲಿ ಜರುಗಿತು.

ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಏಳು ಪ್ರಾಂಚೈಸಿಗಳಾದ ಬಳ್ಳಾರಿ ಟೈಗರ್ಸ್, ಬೆಂಗಳೂರು ಚಾರ್ಜರ್ಸ್, ಮಂಗಳೂರು ರೋರರ್ಸ್, ಕೂರ್ಗ್ ಒರಿಜಿನಲ್ಸ್, ಬೆಳಗಾವಿ ಬ್ಯಾರನ್ಸ್, ತುಮಕೂರು ಟೈಟನ್ಸ್ ಮತ್ತು ಮೈಸೂರು ರಾಯಲ್ಸ್ ತಂಡಗಳ ಆಟಗಾರರು ತಮ್ಮ ತಂಡದ ಜೆರ್ಸಿಗಳನ್ನು ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ KPPL ನಾಯಕರೊಂದಿಗೆ, ತಂಡಗಳ ಮಾಲೀಕರು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು. ಈ ಕೂಟದ ಪ್ರಮುಖ ಆಕರ್ಷಣೆಯಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ KPPL ಬ್ರ್ಯಾಂಡ್ ಅಂಬಾಸಿಡರ್ ಶ್ರೀಮುರಳಿ ಅವರು ಆಗಮಿಸಿ ಜೆರ್ಸಿ ಅನಾವರಣಗೊಳಿಸಿ ಶುಭ ಹಾರೈಸಿದರು.

ತಂಡಗಳ ಹರಾಜು ಮತ್ತು ಆಟಗಾರರ ಆಯ್ಕೆ ಪ್ರಕ್ರಿಯೆಯ ನಂತರ ನಡೆದ ಈ ಜೆರ್ಸಿ ಬಿಡುಗಡೆ ಕಾರ್ಯಕ್ರಮವು, ರಾಜ್ಯದಲ್ಲಿ ಪಿಕಲ್‌ ಬಾಲ್ ಕ್ರೀಡೆಯ ಜಾಗೃತಿಯನ್ನು ಹೆಚ್ಚಿಸುವ ಜೊತೆಗೆ ಮೊದಲ ಆವೃತ್ತಿಯ ಪಂದ್ಯಾವಳಿಗೆ ಬಿರುಸಿನ ಚಾಲನೆ ನೀಡಿದೆ.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಇಂಡಿಯಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ನವದೆಹಲಿ,ಅಕ್ಟೋಬರ್,6,2026 (www.justkannada.in): ಎಸ್ ಐಆರ್ ವಿರುದ್ದ ಹಾಗೂ  ಕೇಂದ್ರ ಮುಖ್ಯ ಚುನಾವಣಾ...

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿದ್ದರಾಮಯ್ಯ, ಸಿಎಂ ಡಿಕೆಶಿ ನುಡಿದಂತೆ ನಡೆದಿದ್ದಾರೆ-ಸಚಿವ ಯತೀಂದ್ರ

ಮೈಸೂರು,ಅಕ್ಟೋಬರ್,5,2026 (www.justkannada.in): ನಾವು ನುಡಿದಂತೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ.  ಸಿದ್ದರಾಮಯ್ಯ ನುಡಿದಂತೆ ನಡೆದುಕೊಂಡರು....

ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ನಕಾರ: ಕೇಂದ್ರ ಚು. ಆಯೋಗಕ್ಕೆ ನೋಟಿಸ್

ನವದೆಹಲಿ, ಅಕ್ಟೋಬರ್,5,2026 (www.justkannada.in):  ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆ ಪಡೆಯದೆ ಏಕಪಕ್ಷೀಯವಾಗಿ...

ಮೈಸೂರಿನಲ್ಲಿ ಬರ ಪರಿಸ್ಥಿತಿ: ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಬರ ಅಧ್ಯಯನ ತಂಡ

ಮೈಸೂರು, ಅಕ್ಟೋಬರ್,5,2026(www.justkannada.in): ಮೈಸೂರಿನಲ್ಲಿ ಬರ ಪರಿಸ್ಥಿತಿಯ ಬಗ್ಗೆ  ಕೇಂದ್ರ ಬರ ಅಧ್ಯಯನ...