ಬೆಂಗಳೂರು,ಜೂನ್,11,2025 (www.justkannada.in): ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಜನರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಬಿಡುಗಡೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಆದೇಶವನ್ನ ಹೈಕೋರ್ಟ್ ನಾಳೆಗೆ ಕಾಯ್ದಿರಿಸಿದೆ.
ಕಾಲ್ತುಳಿತ ಪ್ರಕರಣದಲ್ಲಿ ಬಂಧಿತರಾಗಿರುವ ನಿಖಿಲ್ , ಸುನೀಲ್ ಮ್ಯಾಥ್ಯೂ, ಕಿರಣ್, ಶಮಂತ್ ಬಂಧನ ಕಾನೂನು ಬಾಹಿರ. ಹೀಗಾಗಿ ಬಿಡುಗಡೆಗೊಳಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ಆರ್ ಕೃಷ್ಣಕುಮಾರ್ ಅವರ ಪೀಠವು ವಾದ, ಪ್ರತಿವಾದ ಆಲಿಸಿತು.
ಸರ್ಕಾರದ ಪರ ಇಂದು ವಾದ ಮುಂದುವರೆಸಿದ ಎಜಿ ಶಶಿಕಿರಣ್ ಶೆಟ್ಟಿ, ಅರ್ಜಿದಾರರು ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದಾರೆ. ಆರೋಪಿಗಳಿಗೆ ಬಂಧನದ ಲಿಖಿತ ಕಾರಣಗಳನ್ನ ಒದಗಿಸಲಾಗಿದೆ ಸಿಎಂ ಸೂಚನೆ ಮೇರೆಗೆ ಬಂಧನವಾಗಿದೆ ಎಂಬುದು ಸರಿಯಲ್ಲ ಎಂದರು.
ಅರ್ಜಿದಾರರ ಪರ ಚೌಟ ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾ. ಎಸ್. ಆರ್ ಕೃಷ್ಣಕುಮಾರ್ ಅವರ ಪೀಠವು ಮಧ್ಯಂತರ ಆರ್ಜಿ ಬಗ್ಗೆ ಆದೇಶವನ್ನ ನಾಳೆ ಮಧ್ಯಾಹ್ನ 2.30ಕ್ಕೆ ಕಾಯ್ದಿರಿಸಿದೆ.
Key words: stampede case, High Court, reserves order, interim petition
The post ಕಾಲ್ತುಳಿತದಲ್ಲಿ 11 ಜನರ ಸಾವು ಕೇಸ್: ಮಧ್ಯಂತರ ಅರ್ಜಿ ಆದೇಶ ನಾಳೆಗೆ ಕಾಯ್ದಿರಿಸಿದ ಹೈಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.