ಬೆಂಗಳೂರು,ಸೆಪ್ಟಂಬರ್,1,2026 (www.justkannada.in): ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜೀರೋ ಟ್ರಾಫಿಕ್ ನೀಡಿದ್ದಕ್ಕೆ ಮಾಜಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಿಸಿರುವ ಬಿ.ಸಿ ಪಾಟೀಲ್, ಗೃಹ ಸಚಿವರಿಗೆ ಜೀರೋ ಟ್ರಾಫಿಕ್ ನೀಡುವ ವ್ಯವಸ್ಥೆ ಇಲ್ಲ. ಬೆಳಿಗ್ಗೆ 5.30ಕ್ಕೆ ಏರ್ ಪೋರ್ಟ್ ಗೆ ಹೋಗುವಾಗ ರಸ್ತೆ ಬಂದ್ ಮಾಡಿದ್ದರು. ಕೇಳಿದ್ದಕ್ಕೆ ಗೃಹ ಸಚಿವರ ಮೂಮೆಂಟ್ ಇದೆ ಎಂದು ಹೇಳಿದ್ದಾರೆ. ಮಾಹಿತಿಯ ಪ್ರಕಾರ ಗೃಹಸಚಿವರಿಗೆ ಜೀರೋ ಟ್ರಾಫಿಕ್ ಇಲ್ಲ ಜೀರೋ ಟ್ರಾಫಿಕ್ ನೀಡಿದ್ದಕ್ಕೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ಏರ್ ಪೋರ್ಟ್ ಗೆ ಹೋಗುವ ಜನ ಪರದಾಡುವಂತಾಯಿತು.
ಅಲ್ಪರಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಲಿ ಕೊಡೆ ಹಿಡಿದಿದ್ದರು ಅಂತಾರೆ. ಹಾಗಾಯಿತು ಈ ಕರ್ನಾಟಕ ರಾಜ್ಯದ ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಕತೆ. ಸಾಕಷ್ಟು ಪ್ರಯಾಣಿಕರು ಫ್ಲೈಟ್ ತಪ್ಪಿ ಹೋಗುತ್ತೆ ಅಂತಾ ಪರದಾಡುತ್ತಿದ್ದರು. ಇದು ಎಐಸಿಸಿ ಅಧ್ಯಕ್ಷರ ಮಗ ಎನ್ನುವುದಕ್ಕೆ ವಿಶೇಷ ಸೌಲಭ್ಯವೇ? ಇನ್ಮುಧೆ ಆದರೂ ಸಿಎಂ ಇಂತಹ ಗೃಹ ಮಂತ್ರಿಗೆ ಸೂಕ್ತ ತಿಳುವಳಿಕೆ ನೀಡಿ ಕಾನೂನು ಬದ್ಧವಾಗಿ ನಡೆದುಕೊಳ್ಳಲು ಗಮನಹರಿಸಬೇಕು ಎಂದು ಬಿ.ಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
Key words: Zero traffic, Home Minister, Priyank Kharge, BC Patil, objects
The post ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜೀರೋ ಟ್ರಾಫಿಕ್: ಬಿ.ಸಿ ಪಾಟೀಲ್ ಆಕ್ಷೇಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




