3
October, 2026

A News 365Times Venture

3
Saturday
October, 2026

A News 365Times Venture

ಚಿತ್ರಸಂತೆಗೆ ಚಾಲನೆ : ವಿವಿಧ ಕಲಾಕೃತಿಗಳನ್ನ ವೀಕ್ಷಿಸಿ ಶ್ಲಾಘಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ

Date:

ಮೈಸೂರು ಅಕ್ಟೋಬರ್,2,2026 (www.justkannada.in): ಎರಡು ದಿನಗಳ ಕಾಲ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಮುಂಭಾಗ ನಡೆಯಲಿರುವ ಚಿತ್ರಸಂತೆಗೆ ನಗರಾಭಿವೃದ್ಧಿ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಚಿತ್ರ ಬಿಡಿಸುವ ಮೂಲಕ‌ ಚಿತ್ರಸಂತೆಗೆ ಚಾಲನೆ ನೀಡಿದರು.

ವಿವಿಧ ಕಲಾವಿದರು ತಮ್ಮ ಕಲಾಕೃತಿಗಳನ್ನು ಅನಾವರಣಗೊಳಿಸಲು ತೆರೆಯಲಾಗಿದ್ದ 88 ಮಳಿಗೆಯಲ್ಲಿ ಕಲಾಕುಂಜಗಳನ್ನು ಸಚಿವರು ಶಾಸಕರು ಹಾಗೂ ಗಣ್ಯರು ವೀಕ್ಷಿಸಿ ಪ್ರಶಂಸೆ ವ್ಯಕ್ತ ಪಡಿಸಿದರು.

ಡೊಳ್ಳು ಕುಣಿತ ಸೇರಿದಂತೆ ‌ವಿವಿಧ ಕಲಾತಂಡಗಳು ಗಣ್ಯರಿಗೆ ಸ್ವಾಗತ ನೀಡಿತು. ಗಣ್ಯರು ಡಾ: ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉದ್ಘಾಟನೆಯ ಬಳಿಕ ಪ್ರದರ್ಶನದಲ್ಲಿದ್ದ ವಿವಿಧ ಕಲಾಕೃತಿಗಳನ್ನು ವೀಕ್ಷಿಸಿದ ಸಚಿವರು, ಕಲಾವಿದರು ಹಾಗೂ ಸಾರ್ವಜನಿಕರೊಂದಿಗೆ ಅತ್ಯಂತ ಆತ್ಮೀಯವಾಗಿ ಸಂವಾದ ನಡೆಸಿ ಶುಭ ಹಾರೈಸಿದರು.

ನಂತರ ಮಾತನಾಡಿದ ಸಚಿವ ಯತೀಂದ್ರ ಸಿಸಾಂಪ್ರದಾಯಿಕ ಕ್ಯಾಲೆಂಡರ್ ಪ್ರಕಾರ ದಸರಾ ಹಬ್ಬಕ್ಕೆ ಇನ್ನು ದಿನಗಳಿದ್ದರೂ, ಮೈಸೂರಿನಲ್ಲಿ ಒಂದು ತಿಂಗಳ ಮುಂಚಿತವಾಗಿಯೇ ದಸರಾ ಸಂಭ್ರಮ ವಾತಾವರಣ ಪ್ರಾರಂಭವಾಗಿದೆ,  ಪ್ರತಿಯೊಬ್ಬ ಕಲಾ ವಿದರಿಗೆ ಹಾಗೂ ಕಲಾ ಆಸಕ್ತರಿಗೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳಲು ಅವಕಾಶ ಸಿಗಬೇಕು ಎಂದು  ಹೇಳಿದರು.

ಮೈಸೂರು ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ ಸೇರಿದಂತೆ ಎಲ್ಲಾ ಪ್ರಕಾರದ ಕಲೆಗಳಿಗೆ ತವರು ಮನೆಯಾಗಿದೆ. ಇಂತಹ ವಿವಿಧ ಕಲಾ ಪ್ರಕಾರಗಳಲ್ಲಿ ಮುಖ್ಯವಾದ ಚಿತ್ರಕಲೆಗೆ ದಸರಾ ಸಮಯದಲ್ಲಿ ಸೂಕ್ತ ಪ್ರೋತ್ಸಾಹ ನೀಡಲು ಈ ಚಿತ್ರಸಂತೆ ಪ್ರಮುಖ ವೇದಿಕೆಯಾಗಿದೆ ಎಂದರು.

2023ರಲ್ಲೂ  ಚಿತ್ರಸಂತೆಯನ್ನು ಯಶಸ್ವಿಯಾಗಿ ಸಂಘಟಿಸಲಾಗಿತ್ತು. ಕೇವಲ ವಾಣಿಜ್ಯ  ವಸ್ತುಗಳ ಮಾರಾಟದ ಬದಲು ಸದಾಭಿರುಚಿಯ ಮಾರುಕಟ್ಟೆ ನಿರ್ಮಿಸಿ, ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಆಶಯದೊಂದಿಗೆ ಈ ಬಾರಿಯೂ ವಿನೂತನವಾಗಿ ಯೋಜನೆ ರೂಪಿಸಲಾಗಿದೆ ಎಂದರು.

ವಿವಿಧ ರಾಜ್ಯಗಳಿಂದ ಮತ್ತು ಪ್ರದೇಶಗಳಿಂದ ನೂರಾರು ಕಲಾವಿದರು ಆಗಮಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಮೈಸೂರಿನ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಲಾಕೃತಿಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಆರ್ಥಿಕ ಹಾಗೂ ನೈತಿಕ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕ  ಕೆ. ಹರೀಶ್ ಗೌಡ ಅವರು ಮಾತನಾಡಿ ನಾಡಹಬ್ಬ ದಸರಾವನ್ನು ಯಾವುದೇ ಕೊರತೆಯಿಲ್ಲದೆ ಅದ್ದೂರಿಯಾಗಿ ಆಚರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಯುವ ಸಂಭ್ರಮ ಉದ್ಘಾಟನೆಗೊಂಡಿದೆ. ದಸರಾ ಆನೆಗಳು ಮೈಸೂರಿಗೆ ಆಗಮಿಸಿದ್ದು, ಅವುಗಳಿಗೆ ಸ್ವಾಗತ ಕೋರಿ ತಾಲೀಮುಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಮೈಸೂರು ಕಲಾವಿದರ ನಗರವಾಗಿದ್ದು, ಈ ಬಾರಿಯ ಚಿತ್ರಸಂತೆಯಲ್ಲಿ 2023ನೇ ಸಾಲಿಗಿಂತಲೂ ಹೆಚ್ಚಿನ ಸಂಖ್ಯೆಯ ಸ್ಟಾಲ್‌ಗಳನ್ನು ತೆರೆಯಲಾಗಿದೆ ಹಾಗೂ ಹೆಚ್ಚಿನ ಸಂಖ್ಯೆಯ ಚಿತ್ರಕಲಾವಿದರು ಭಾಗವಹಿಸಿದ್ದಾರೆ. ಸ್ವತಃ ಸಚಿವ ಯತೀಂದ್ರ ಸಿದ್ದರಾಮಯ್ಯನವರು ಚಿತ್ರಸಂತೆಯನ್ನು ವೀಕ್ಷಿಸಿ, ಕಲಾಕೃತಿಗಳನ್ನು ಖರೀದಿ ಮಾಡುವ ಮೂಲಕ ಪ್ರೋತ್ಸಾಹಿಸಿದ್ದಾರೆ. ದಸರಾ ಕಾರ್ಯಕ್ರಮಗಳು ಮತ್ತು ಜಂಬೂಸವಾರಿ ಮೆರವಣಿಗೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಉಸ್ತುವಾರಿ ಸಚಿವರಿಗೆ ತಾಯಿ ಚಾಮುಂಡೇಶ್ವರಿ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.

ಕಲಾವಿದೆ ಪಲ್ಲವಿ ಜವಳೇಕರ್ (ಸ್ಟಾಲ್ ಸಂಖ್ಯೆ 24) ಅವರು ಶ್ರೀರಂಗಪಟ್ಟಣ, ಸಂತ ಫಿಲೋಮಿನಾ ಚರ್ಚ್, ರೈಲ್ವೆ ನಿಲ್ದಾಣ ಹಾಗೂ ಜಗನ್ಮೋಹನ ಅರಮನೆ ಸೇರಿದಂತೆ ಮೈಸೂರಿನ ಐತಿಹಾಸಿಕ ಸ್ಥಳಗಳ ಸುಂದರ ಪೋಸ್ಟ್‌ ಕಾರ್ಡ್‌ಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ಕಾಫಿ ಸ್ಟೇನ್ ಬಳಸಿ ತಯಾರಿಸಿದ ವಿಶೇಷ ಬುಕ್‌ ಮಾರ್ಕ್‌ ಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಲಾ ಸಂತೆಗೊಂದು ಹೊಸ ಮೆರುಗು ತಂದಿವೆ.

ಈ ಬಾರಿಯ ಚಿತ್ರಸಂತೆಯಲ್ಲಿ ಕಸ್ಟಮೈಸ್ಡ್ ಬುಕ್‌ಮಾರ್ಕ್‌ಗಳು, ಪೋಸ್ಟ್‌ಕಾರ್ಡ್‌ ಗಳು ಹಾಗೂ ಮಿನಿ ಕ್ಯಾನ್ವಾಸ್ ಇಲಸ್ಟ್ರೇಷನ್‌ ಗಳ ತಾಣಗಳು ಹಾಗೂ ವಿವಿಧ ರೀತಿಯ ವೈವಿದ್ಯಮಯ ಚಿತ್ರಣಗಳ ಮಾರಾಟ ಚಿತ್ರ ಸಂತೆಯಲ್ಲಿ ವಿಶೇಷವಾಗಿ ಜನಪ್ರಿಯತೆ ಗಳಿಸಿವೆ.

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಎಂ. ಕೆ ಸವಿತಾ. ಅವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ಗಣ್ಯರು ಮಕ್ಕಳ ದಸರಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ  ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್,ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎನ್. ರಂಗಸ್ವಾಮಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರನಾಥ್,  ಜಿಲ್ಲಾಧಿಕಾರಿ ಜಿ. ಲಕ್ಷಿಂಕಾಂತರೆಡ್ಡಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಯುಕೇಶ್ ಕುಮಾ‌ರ್,ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕ‌ರ್, ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಮತ್ತಿತರರು ಉಪಸ್ಥಿತರಿದ್ದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಭೀಕರ ಬರಗಾಲ: ತುರ್ತಾಗಿ ಅನುದಾನ ಬಿಡುಗಡೆ ಮಾಡಿ- ಪ್ರಧಾನಿಗೆ ಖರ್ಗೆ ಪತ್ರ

ಬೆಂಗಳೂರು,ಅಕ್ಟೋಬರ್,3,2026 (www.justkannada.in):   ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದ್ದು ಹೀಗಾಗಿ ತುರ್ತಾಗಿ ಕರ್ನಾಟಕಕ್ಕೆ...

ಮತದಾರರ ಪಟ್ಟಿ ಮರು ಪರಿಶೀಲನೆಗೆ ಸೂಚನೆ; ಇದು ದೇಶದ ಮತದಾರರ ಹಕ್ಕಿಗೆ ಸಂದ ಜಯ: ಸಿಎಂ ಡಿಕೆಶಿ

ಬೆಂಗಳೂರು, ಅಕ್ಟೋಬರ್,2,2026 (www.justkannada.in): ವಿಶೇಷ ಅಭಿಯಾನದ ಮೂಲಕ ಎಸ್‌ ಐಆರ್‌ ನಂತರದ...

ಮೈಸೂರು: ‘ಗಾಂಧಿ ಹತ್ಯೆಯ ಸತ್ಯ’ ನಾಟಕ ರದ್ದಿಗೆ ಆಗ್ರಹಿಸಿ ಪ್ರತಿಭಟನೆ; ಅಡ್ಡಂಡ ಕಾರ್ಯಪ್ಪ ಪೋಸ್ಟರ್‌ಗೆ ಬೆಂಕಿ

ಮೈಸೂರು, ಅಕ್ಟೋಬರ್,2,2026 (www.justkannada.in):  ಮೈಸೂರಿನ ಕಿರು ರಂಗಮಂದಿರದಲ್ಲಿ ಪ್ರದರ್ಶನಕ್ಕೆ ಆಯೋಜಿಸಲಾಗಿರುವ ‘ಗಾಂಧಿ...

ಸಕಲ ಸಿದ್ಧತೆಗಳೊಂದಿಗೆ ದಸರಾಗೆ ಕಂಬಳ ಸಜ್ಜು – ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು ಅಕ್ಟೋಬರ್, 2,2026 (www.justkannada.in): ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ...