6
October, 2026

A News 365Times Venture

6
Tuesday
October, 2026

A News 365Times Venture

ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ನಕಾರ: ಕೇಂದ್ರ ಚು. ಆಯೋಗಕ್ಕೆ ನೋಟಿಸ್

Date:

ನವದೆಹಲಿ, ಅಕ್ಟೋಬರ್,5,2026 (www.justkannada.in):  ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆ ಪಡೆಯದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಒಳಗಾಗಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಧ್ಯಂತರ ಅಮಾನತಿಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಎಸ್ ಐಆರ್ ಗೆ ಸಂಬಂಧಿಸಿದ ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆ ಇಲ್ಲದೆ ತೆಗೆದುಕೊಂಡಿದ್ದಾರೆ ಎಂಬ ಆರೋಪದ ಅರ್ಜಿಗಳ ವಿಚಾರಣೆ ನಡೆಸಿದ  ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು, ಯಾವುದೇ ಮಧ್ಯಂತರ ಅಮಾನತು ಆದೇಶ ಹೊರಡಿಸಲು ನಿರಾಕರಿಸಿದ್ದು, ಆರೋಪಗಳ ಕುರಿತು ವಿವರಣೆ ನೀಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ  ನೋಟಿಸ್ ಜಾರಿ ಮಾಡಿದೆ.

ಚುನಾವಣಾ ಆಯೋಗವು ನೋಟಿಸ್‌ಗೆ ಉತ್ತರಿಸಿದ ಬಳಿಕ, ಅಗತ್ಯವಿರುವ ಸರ್ವಾನುಮತವಿಲ್ಲದೆ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂಬುದು ದೃಢಪಟ್ಟರೆ ಅಂತಹ ಆದೇಶಗಳನ್ನು ಮರುಪರಿಶೀಲಿಸಲಾಗುವುದು ಅಥವಾ ರದ್ದುಗೊಳಿಸಲಾಗುವುದು ಎಂದು ಪೀಠ ತಿಳಿಸಿದೆ.  ಸಿಇಸಿಯನ್ನು ಅಮಾನತು ಮಾಡುವಂತೆ ಅಥವಾ ಅವರ ಕಾರ್ಯ ನಿರ್ವಹಣೆಗೆ ತಕ್ಷಣ ತಡೆ ನೀಡುವಂತೆ ಯಾವುದೇ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

Key words: Supreme Court, refuses, suspend, Gyanesh Kumar, notice, Election Commission.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ಪಿಕಲ್‌ ಬಾಲ್ ಪ್ರೀಮಿಯರ್ ಲೀಗ್ (KPPL): ಜೆರ್ಸಿ ಅನಾವರಣ

ಬೆಂಗಳೂರು, ಅಕ್ಟೋಬರ್,6,2026 (www.justkannada.in): ಕರ್ನಾಟಕ ಸ್ಟೇಟ್ ಪಿಕಲ್‌ ಬಾಲ್ ಅಸೋಸಿಯೇಷನ್ (KSPA)...

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿದ್ದರಾಮಯ್ಯ, ಸಿಎಂ ಡಿಕೆಶಿ ನುಡಿದಂತೆ ನಡೆದಿದ್ದಾರೆ-ಸಚಿವ ಯತೀಂದ್ರ

ಮೈಸೂರು,ಅಕ್ಟೋಬರ್,5,2026 (www.justkannada.in): ನಾವು ನುಡಿದಂತೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ.  ಸಿದ್ದರಾಮಯ್ಯ ನುಡಿದಂತೆ ನಡೆದುಕೊಂಡರು....

ಮೈಸೂರಿನಲ್ಲಿ ಬರ ಪರಿಸ್ಥಿತಿ: ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಬರ ಅಧ್ಯಯನ ತಂಡ

ಮೈಸೂರು, ಅಕ್ಟೋಬರ್,5,2026(www.justkannada.in): ಮೈಸೂರಿನಲ್ಲಿ ಬರ ಪರಿಸ್ಥಿತಿಯ ಬಗ್ಗೆ  ಕೇಂದ್ರ ಬರ ಅಧ್ಯಯನ...

ದೆಹಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ಮಹಿಳಾ ಪತ್ರಕರ್ತೆಗೆ ಕಿರುಕುಳ : KUWJ ಖಂಡನೆ

ಬೆಂಗಳೂರು,ಅಕ್ಟೋಬರ್,5,2026 (www.justkannada.in): ದೆಹಲಿಯ ಜಂತರ್ ಮಂತರ್‌ ನಲ್ಲಿ ಪ್ರತಿಭಟನೆಯ ವರದಿಗೆ ತೆರಳಿದ್ದ...