ಕೊಡಗು,ಜೂನ್,20,2025 (www.justkannada.in): ದರೋಡೆಕೋರರು, ಕಳ್ಳರನ್ನ ಹಿಡಿಯುವ ಪೋಲಿಸರ ಮನೆಗಳಿಗೆಯೇ ಚಾಲಾಕಿ ಕಳ್ಳರು ಕನ್ನ ಹಾಕಿದ ಘಟನೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯಲ್ಲಿ ಮೈತ್ರಿಹಾಲ್ ಪಕ್ಕದಲ್ಲಿರುವ 8 ಪೋಲಿಸ್ ವಸತಿ ಗೃಹಗಳಲ್ಲಿ ರಾತ್ರಿ ಕಳ್ಳತನ ನಡೆದಿದೆ. ಸ್ವಲ್ಪ ದೂರದಲ್ಲೇ ಪೋಲಿಸ್ ಠಾಣೆ ಇದ್ದರೂಸಹ ದರೋಡೆಕೋರರು ಭಯ ಪಡೆದ ತಮ್ಮ ಕೈಚಳಕ ತೋರಿಸಿದ್ದಾರೆ.
ಕ್ರೈಂ ನಡೆದು ಕೆಲವೇ ಗಂಟೆಗಳಲ್ಲಿ ಕಳ್ಳರ ಎಡೆಮುರಿ ಕಟ್ಟುವ ಪೋಲಿಸ್ ವಸತಿ ಗೃಹಗಳಿಗೆಯೇ ಭದ್ರತೆ ಇಲ್ಲದಂತಾಗಿದೆ. ಒಂದೇ ರಾತ್ರಿಯಲ್ಲಿ 8 ಪೋಲಿಸ್ ವಸತಿ ಗೃಹಗಳಲ್ಲಿ ಕಳ್ಳರು ಕಳ್ಳತನವೆಸಗಿದ್ದು, ಮನೆಯಲ್ಲಿದ್ದ ಸಣ್ಣಪುಟ್ಟ ವಸ್ತುಗಳನ್ನ ದೋಚಿ ಪರಾರಿಯಾಗಿದ್ದಾರೆ.
ಕಳ್ಳರ ಕಳ್ಳತನದಿಂದ ಪೋಲಿಸ್ ಕುಟುಂಬ ಬೆಚ್ಚಿಬಿದ್ದಿದ್ದು ಕಳ್ಳತನ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಇನ್ನು ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿ ಕೊಡಗು ಪೋಲಿಸರು ಕಳ್ಳರ ಬೇಟೆಗಿಳಿದಿದ್ದಾರೆ.
Key words: Thieves, police, houses, Madikeri
The post ಪೋಲಿಸರ ಮನೆಗಳಿಗೆಯೇ ಕನ್ನ ಹಾಕಿದ ಕಳ್ಳರು: ಸ್ಥಳೀಯರಲ್ಲಿ ಆತಂಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.