ಚಾಮರಾಜನಗರ,ಏಪ್ರಿಲ್,16,2025 (www.justkannada.in): ದರೋಡೆಕೋರರು ಮನೆಯ ಬಾಗಿಲು ಮೀಟಿ ಚಿನ್ನ, ಬೆಳ್ಳಿ, ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಮಂಜುಳಾ ಎಂಬುವರು ಬಾಡಿಗೆಗಿದ್ದ ಮನೆಯಲ್ಲಿ ದರೋಡೆ ನಡೆಸಲಾಗಿದೆ. ಕಳ್ಳರು ಮನೆಯ ಬಾಗಿಲು ಮೀಟಿ 120 ಗ್ರಾಂ ಚಿನ್ನ, 210 ಗ್ರಾಂ ಬೆಳ್ಳಿ, ಹತ್ತು ಸಾವಿರ ರೂಪಾಯಿ ನಗದನ್ನು ಕಳ್ಳತನ ಮಾಡಿದ್ದಾರೆ.
ಮನೆಯವರು ಬೀಗ ಹಾಕಿ ಹೊರ ಹೋಗಿದ್ದ ಸಂದರ್ಭದಲ್ಲಿ ದರೋಡೆಕೋರರು ತಮ್ಮ ಕೈಚಳಕ ತೋರಿದ್ದು, ಇಂದು ಮನೆಗೆ ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಇನ್ನು ಸ್ಥಳಕ್ಕೆ ಅಡಿಷನಲ್ ಎಸ್ಪಿ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Gold, silver, cash, stolen, Robbery
The post ಮನೆಯ ಬಾಗಿಲು ಮೀಟಿ ಚಿನ್ನ, ಬೆಳ್ಳಿ, ನಗದು ಕಳ್ಳತನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.