ಚಾಮರಾಜನಗರ,ಜನವರಿ,28,2025 (www.justkannada.in): ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು ಸರ್ಕಾರ ಎಚ್ಚರಿಕೆಗೂ ಜಗ್ಗುತ್ತಿಲ್ಲ. ಈ ಮಧ್ಯೆ ಸಾಲ ಮರುಪಾವತಿ ಮಾಡದ ಮನೆಯನ್ನ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸೀಜ್ ಮಾಡಿದ ಹಿನ್ನೆಲೆ ಕುಟುಂಬವೊಂದು ಬೀದಿಗೆ ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂತೇಮರಹಳ್ಳಿ ಗ್ರಾಮದ ರಾಜೇಶ್ ಮತ್ತು ಶ್ವೇತ ದಂಪತಿಗಳ ಮನೆಯನ್ನ ಸೀಜ್ ಮಾಡಲಾಗಿದೆ. ಕೆಲ ವರ್ಷಗಳ ಹಿಂದೆ ದಂಪತಿ ಚಾಮರಾಜನಗರದ ಮೈಕ್ರೋ ಫೈನಾನ್ಸ್ ಒಂದರಲ್ಲಿ ಮನೆ ಮೇಲೆ 15 ಲಕ್ಷ ಸಾಲ ಮಾಡಿದ್ದರು. ಆದರೆ ಸಕಾಲದಲ್ಲಿ ಸಾಲ ಮರು ಪಾವತಿ ಮಾಡದ ಕಾರಣ ವಾರದ ಹಿಂದೆಯೇ ಫೈನಾನ್ಸ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದು, ಮನೆ ಇಲ್ಲದೆ ಕುಟುಂಬ ಬೀದಿಗೆ ಬಿದ್ದಿದೆ.
ದಂಪತಿ ಸ್ವಲ್ಪ ಪ್ರಮಾಣದ ಹಣ ಕಟ್ಟಿಕೊಡುತ್ತೇವೆ ಎಂದರೂ ಕೇಳದ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದು, ಮನೆ ಜಗುಲಿಯಲ್ಲಿ ವಾಸ ಮಾಡುತ್ತಿದ್ದಾರೆ. ಮಕ್ಕಳ ಶಾಲೆಗೆ ಕಳುಹಿಸಲೂ ಆಗದೆ ಕುಟುಂಬ ಪರದಾಟ ನಡೆಸುತ್ತಿದ್ದು ನ್ಯಾಯಕ್ಕಾಗಿ ಸಂತ್ರಸ್ತರು ಆಗ್ರಹಿಸಿದ್ದಾರೆ.
Key words: Microfinance, house, siege, Family, Chamarajanagar
The post ಮೈಕ್ರೋ ಫೈನಾನ್ಸ್ ನಿಂದ ಮನೆ ಸೀಜ್: ಬೀದಿಗೆ ಬಿದ್ದ ಕುಟುಂಬ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.