27
June, 2026

A News 365Times Venture

27
Saturday
June, 2026

A News 365Times Venture

ಮೈಸೂರು: ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

Date:

ಮೈಸೂರು,ಮೇ,20,2026 (www.justkannada.in): ಕುಡಿಯುವ ನೀರಿನ ಸಮರ್ಪಕ ಪೂರೈಕೆ  ಮಾಡಲು ಆಗ್ರಹಿಸಿ ಹೆಗ್ಗಡದೇವನಕೋಟೆ ತಾಲೂಕಿನ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಳದ ಹಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಎನ್ ಬೇಗೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು AIJASC (ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ) ನೇತೃತ್ವದಲ್ಲಿ ಪ್ರತಿಭಟನೆ  ನಡೆಸಲಾಯಿತು.  ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಂಪರಾಜು ಅವರು “ಇಂದೇ ಬೋರ್ ವೆಲ್(ಕೈಪಂಪ್) ಅನ್ನು ರಿಪೇರಿ ಮಾಡಿಸಲಾಗುವುದು. ಹಾಗೂ  ಮೋಟಾರ್ ರಿಪೇರಿಗೆ ಕೆಲಸ ನಡೆಯುತ್ತಿದ್ದು ನಾಳೆಯೊಳಗೆ ನೀರು ಪೂರೈಕೆ ಆಗುತ್ತದೆ ಇಲ್ಲವಾದರೆ ನಾಳೆಯಿಂದ ಟ್ಯಾಂಕರ್ ಮೂಲಕ ನೀರನ್ನು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

ಗ್ರಾಮದ ಮಹಿಳೆ ಭಾಗ್ಯ ಎಂಬುವವರು ಮಾತನಾಡಿ ” ಕಳೆದ ಮೂರು ತಿಂಗಳಿಂದಲೂ ಸಹ ಪದೇಪದೇ ಕುಡಿಯೋ ನೀರಿನ ಸಮಸ್ಯೆಯಾಗುತ್ತಿದ್ದು,  ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗಿ ಬರುವ ನಮ್ಮಂತ ಬಡ ಆದಿವಾಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಸಹ ಮಾಡದಿದ್ದರೆ ಬಹಳ ತೊಂದರೆಯಾಗುತ್ತಿದೆ, ಕುಡಿಯುವ ನೀರಿಗಾಗಿ ಪ್ರತಿದಿನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಇದುವರೆಗೂ ಗಮನ ಹರಿಸುತ್ತಿಲ್ಲ ಹಾಗಾಗಿ ಇಂದು ಪ್ರತಿಭಟನೆ ಮಾಡಿದ್ದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೇಳಿದಂತೆ ಇಂದು ನಾಳೆಯೊಳಗೆ ನೀರಿನ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಗ್ರಾಮ ಪಂಚಾಯತಿಯ ಮುಂದೆ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿಯ ಮುಖಂಡ ಸುನಿಲ್  ಮಾತನಾಡಿ,  ಕಬಿನಿ ಹಿನ್ನೀರಿನ ಪ್ರದೇಶ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಮಾಳದ ಹಾಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಿರ್ಲಕ್ಷ ತೋರುತ್ತಿರುವುದು ಖಂಡನೀಯ.  ಈ ಕೂಡಲೇ ಕೈ ಪಂಪನ್ನು ರಿಪೇರಿ ಮಾಡಬೇಕು.  ಹಾಗೆಯೇ  ಮೋಟಾರನ್ನು ರಿಪೇರಿ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಮೂಲಭೂತ ಸೌಕರ್ಯಗಳಾದ ರಸ್ತೆ,ಚರಂಡಿ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.

ಮಾಳದ ಹಾಡಿ ಗ್ರಾಮಸ್ಥರಾದ ನಾಗಮ್ಮ, ಬಸಮ್ಮ, ಜ್ಯೋತಿ , ಭಾಗ್ಯ ಗಂಗೆ, ನವೀನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Key words: Mysore,  Protest, supply, drinking water

The post ಮೈಸೂರು: ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ

ಶಿವಮೊಗ್ಗ,ಜೂನ್,27,2026 (www.justkannada.in):  ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ, ಫಿಲಂ ಚೇಂಬರ್...

ಸಸಿ ನೆಡುವುದಷ್ಟೇ ಅಲ್ಲ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸ ಮಾಡಬೇಕು- ಕೇಂದ್ರ ಸಚಿವ HDK ಟಾಂಗ್

ಬೆಂಗಳೂರು,ಜೂನ್,27,2026 (www.justkannada.in):  ನಾಡಪ್ರಭು ಕೆಂಪೇಗೌಡರ ಜಯಂತಿ ವೇಳೆ ಕೇವಲ ಸಸಿ ನೆಡುವುದಷ್ಟೇ...

ನಾನು ಯಲಹಂಕದಲ್ಲೇ ನಿಂತು ಅವರನ್ನೇ ಸೋಲಿಸ್ತೇನೆ- ಸ್ವಪಕ್ಷದ ಶಾಸಕನಿಗೆ ಸಂಸದ ಕೆ.ಸುಧಾಕರ್ ತಿರುಗೇಟು

ಬೆಂಗಳೂರು,ಜೂನ್.27,2026 (www.justkannada.in):  ಯಲಹಂಕದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಹಮ್ಮಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ...

ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನ ಮಾತೃ ಇಲಾಖೆಗೆ ವಾಪಸ್ ಕರೆಸಿ- ಸಚಿವ ರಾಮಲಿಂಗರೆಡ್ಡಿ ಸೂಚನೆ

ಬೆಂಗಳೂರು,ಜೂನ್,26,2026 (www.justkannada.in): ಬೇರೆ ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಲಸಂಪನ್ಮೂಲ ಇಲಾಖೆಯ...