ಬೆಂಗಳೂರು,ಮೇ,22,2026 (www.justkannada.in): ಕನ್ನಡ ವಿಷಯಗಳಿಗೆ ಹೋರಾಟ ಮಾಡುತ್ತಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗೆ ರಾಜ್ಯ ಸರ್ಕಾರ ರಿಲೀಫ್ ನೀಡಿದೆ.
ವಾಟಾಳ್ ನಾಗರಾಜ್ ಮೇಲಿನ ಕೇಸ್ ಗಳನ್ನ ಸರ್ಕಾರ ಹಿಂಪಡೆಯಲು ನಿರ್ಧರಿಸಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಾಟಾಳ್ ನಾಗರಾಜ್ ವಿರುದ್ದ ದಾಖಲಾಗಿದ್ದ 10 ಕೇಸ್ ಗಳು ವಾಪಸ್ ಪಡೆಯಲು ನಿರ್ಧರಿಸಲಾಗಿದೆ.
ಕನ್ನಡಪರ ವಿಷಯಗಳ ಮೇಲೆ ವಾಟಾಳ್ ನಾಗರಾಜ್ ಹೋರಾಟ ಮಾಡಿದ್ದರು. ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆ, ಹೈಗ್ರೌಂಡ್ಸ್ ಠಾಣೆ ಸೇರಿ ವಿವಿಧ ಠಾಣೆಗಳಲ್ಲಿ ವಾಟಾಳ್ ನಾಗರಾಜ್ ವಿರುದ್ದ ದಾಖಲಾಗಿದ್ದ ಕೇಸ್ ಗಳು ವಾಪಸ್ ಗೆ ನಿರ್ಧರಸಲಾಗಿದೆ.
Key words: Big relief, Vatal Nagaraj, 10 cases, withdrawn
The post ವಾಟಾಳ್ ನಾಗರಾಜ್ ಗೆ ರಿಲೀಫ್: 10 ಕೇಸ್ ಗಳು ವಾಪಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




