10
August, 2026

A News 365Times Venture

10
Monday
August, 2026

A News 365Times Venture

ಕೊನೆಯ ಆಷಾಢ: ತಾಯಿ ಚಾಮುಂಡೇಶ್ವರಿಗೆ ವಿಶೇಷಾಲಂಕಾರ: ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

Date:

ಮೈಸೂರು,ಆಗಸ್ಟ್,7,2026 (www.justkannada.in): ಇಂದು ಕೊನೆಯ ಆಷಾಢ ಶುಕ್ರವಾರ  ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದ್ದು ತಾಯಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಭಕ್ತಗಣವೇ ಹರಿದು ಬಂದಿದೆ.

ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರೆ  ಸಕಲವೂ ಸಿದ್ದಿಯಾಗತ್ತೆ ಎಂಬ  ನಂಬಿಕೆ ಇದ್ದು ನಾಡಿನ ನಾನಾ ಮೂಲಗಳಿಂದ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ವಿವಿಧ ಬಗೆಯ ಹೂವುಗಳಿಂದ ಪುಷ್ಪಾಲಂಕಾರ ಮಾಡಲಾಗಿದ್ದು, ತಾಯಿ ಚಾಮುಂಡೇಶ್ವರಿ ಮಹಾಲಕ್ಷ್ಮಿ ಅಲಂಕಾರದಲ್ಲಿ ಆಕಾಶ ನೀಲಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಬೆಳಿಗ್ಗೆ 3 ಗಂಟೆಗೆ ಪೂಜೆ ಪುನಸ್ಕಾರ ನೆರವೇರಿದ್ದು 5.30 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಲಲಿತಾ ಮಹಲ್ ಗ್ರೌಂಡ್ ನಿಂದ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಧರ್ಮ ದರ್ಶನ ಹಾಗೂ 2 ಸಾವಿರ ರೂಪಾಯಿ ಟಿಕೆಟ್ ಪಡೆದು ದರ್ಶನ ಪಡೆಯಬಹುದಾಗಿದೆ. 2 ಸಾವಿರ ರೂಪಾಯಿ  ಟಿಕೆಟ್ ಖರೀದಿ ಮಾಡಿದವರಿಗೆ ಎಸಿ ಬಸ್ ಹಾಗೂ ಅರ್ಧಗಂಟೆಯಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ  ಸಿಗಲಿದ್ದು ದರ್ಶನದ ಜೊತೆಗೆ ಪ್ರಸಾದದ ಕಿಟ್ ವಿತರಣೆ ಮಾಡಲಾಗುತ್ತಿದೆ. ಕಿಟ್ ನಲ್ಲಿ ವಾಟರ್ ಬಾಟಲ್, ಲಾಡು ಪ್ರಸಾದ, ಚಾಮುಂಡೇಶ್ವರಿ ವಿಗ್ರಹ ಹಾಗೂ ಕುಂಕುಮ ಲಭ್ಯವಿರಲಿದೆ.

ಚಾಮುಂಡಿ ಬೆಟ್ಟದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಿವಿಐಪಿ ಗಳಿಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. 10 ಗಂಟೆಯ ನಂತರ ಬಂದ್ರೆ 2 ಸಾವಿರ ಟಿಕೆಟ್ ಕ್ಯೂ ಅಥವಾ ಧರ್ಮ ದರ್ಶನದಲ್ಲಿ ದರ್ಶನ ಪಡೆಯಲು ಸೂಚನೆ ನೀಡಲಾಗಿದೆ.

Key words: Last Ashada, ​​devotees, Mysore, Chamundi Hills

The post ಕೊನೆಯ ಆಷಾಢ: ತಾಯಿ ಚಾಮುಂಡೇಶ್ವರಿಗೆ ವಿಶೇಷಾಲಂಕಾರ: ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹೊರಟ್ಟಿ ಹೃದಯ ವೈಶಾಲ್ಯತೆ ಶ್ಲಾಘನೀಯ: ಬದಲಿ ವ್ಯವಸ್ಥೆವರೆಗೂ ಅವರನ್ನೇ ಮುಂದುವರಿಸಲು ಶಿಫಾರಸ್ಸು- ಸಿಎಂ ಡಿಕೆಶಿ

ಬೆಂಗಳೂರು, ಆಗಸ್ಟ್,7,2026 (www.justkannada.in):  ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ...

ಸೆಂಟಮ್ ಎಲೆಕ್ಟ್ರಾನಿಕ್ಸ್ ನಿಂದ ನಾಲ್ಕು ವರ್ಷಗಳಲ್ಲಿ 500 ಕೋಟಿ ರೂ. ಹೂಡಿಕೆ-ಸಚಿವ ಎಂ. ಬಿ ಪಾಟೀಲ್

ಬೆಂಗಳೂರು,ಆಗಸ್ಟ್,7,2026 (www.justkannada.in):  ರಕ್ಷಣಾ ಉದ್ಯಮದಲ್ಲಿ ಹೆಸರು ಮಾಡಿರುವ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು...

ಆ.13ರ  ಬಂದ್ ಮುಂದೂಡುವುದು ಸೂಕ್ತ – ಕುರುಬೂರು ಶಾಂತಕುಮಾರ್

ಮೈಸೂರು,ಆಗಸ್ಟ್,7,2026 (www.justkannada.in):  ತಮಿಳುನಾಡಿಗೆ ನೀರು ಬಿಡುದಂತೆ ಆಗ್ರಹಿಸಿ ಆಗಸ್ಟ್ 13 ರಂದು...

ಎರಡು ದಿನ ಕಳೆದ್ರೆ ಎಲ್ಲರೂ ಸುಮ್ಮನಾಗ್ತಾರೆ- ಸಚಿವ ಪುಟ್ಟರಂಗಶೆಟ್ಟಿ

ಚಾಮರಾಜನಗರ,ಆಗಸ್ಟ್,7,2026 (www.justkannada.in):  ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವ ಸ್ಥಾನ ಕೈತಪ್ಪಿದ...