10
August, 2026

A News 365Times Venture

10
Monday
August, 2026

A News 365Times Venture

ನಮ್ಮ ಸಂಸ್ಕೃತಿ, ಧರ್ಮ, ಆಚರಣೆ ಬಗ್ಗೆ ಯತೀಂದ್ರ ಹೋಗಿ ತನ್ನ ತಾಯಿ ಬಳಿ ಪ್ರಶ್ನೆ ಕೇಳಲಿ-ಶೋಭಾ ಕರಂದ್ಲಾಜೆ

Date:

ಮೈಸೂರು,ಆಗಸ್ಟ್,7,2026 (www.justkannada.in): ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂಬ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದು, ಯತೀಂದ್ರ ಸಿದ್ದರಾಮಯ್ಯ ಅವರು ಹೋಗಿ ತನ್ನ ತಾಯಿಗೆ ಈ ಬಗ್ಗೆ ಪ್ರಶ್ನೆ ಕೇಳಲಿ. ನಾವು ಯಾವುದನ್ನ ಆಚರಣೆ ಮಾಡುತ್ತೇವೆ ಎಂಬುದನ್ನ ಯತೀಂದ್ರ ಅವರ ತಾಯಿಯ ಬಳಿ ಕೇಳಲಿ ಎಂದು  ಹೇಳಿದ್ದಾರೆ.

ಇಂದು ಕೊನೆಯ ಆಷಾಢ ಶುಕ್ರವಾರ ಹಿನ್ನಲೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಶೋಭಾ ಕರಂದ್ಲಾಜೆಗೆ ಬಿಜೆಪಿ ನಾಯಕರು ಸಾಥ್ ನೀಡಿದರು.

ಬಳಿಕ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ  ಪ್ರತಿಕ್ರಿಯಿಸಿ, ಯತೀಂದ್ರ ಹೋಗಿ ತನ್ನ ತಾಯಿಗೆ ಈ ಬಗ್ಗೆ ಪ್ರಶ್ನೆ ಕೇಳಲಿ. ನಾವು ಯಾರು, ನಮ್ಮ ಸಂಸ್ಕೃತಿ ಯಾವುದು, ನಮ್ಮ ಧರ್ಮ ಯಾವುದು? ನಾವು ಯಾವುದನ್ನ ಆಚರಣೆ ಮಾಡುತ್ತೇವೆ ಎಂಬುದನ್ನ ಯತೀಂದ್ರ ಅವರ ತಾಯಿಯ ಬಳಿ ಕೇಳಲಿ. ಯತೀಂದ್ರರನ್ನ ಹೆತ್ತು ಹೊತ್ತ ಸಿದ್ದರಾಮಯ್ಯನವರ ಪತ್ನಿ ಅವರೇ ಮಗನಿಗೆ ಸರಿಯಾದ ಉತ್ತರ ಕೊಡುತ್ತಾರೆ ಎಂದು ಟಾಂಗ್ ಕೊಟ್ಟರು.

ಈ ಸಂಸ್ಕೃತಿ ಈ ಧರ್ಮ ಉಳಿಸುವವರಿಗೆ ತಾಯಿ ಚಾಮುಂಡಿ ಶಕ್ತಿ ಕೊಡಲಿ. ಮಹರಾಜರು ಈ ನೆಲದ ಸಂಸ್ಕೃತಿ ಧರ್ಮವನ್ನ ಉಳಿಸಿದರು. ಇವತ್ತು ಸರ್ಕಾರ ನಡೆಸುವವರು ಕೂಡ ಅದೇ ಸ್ಥಾನದಲ್ಲಿ ಇರುತ್ತಾರೆ. ಸಂಸ್ಕೃತಿ ಉಳಿಸುವವರಿಗೆ ತಾಯಿ ಆಶೀರ್ವಾದ ಇರಲಿ ಎಂದರು.

ಎಸ್ ಐಆರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಇಡೀ ದೇಶದಲ್ಲೇ ಅತಿ ಹೆಚ್ಚು ಮತಗಳು ಡಿಲಿಟ್ ಆಗಿರುವುದು ಕರ್ನಾಟಕದಲ್ಲಿ, ಅದರಲ್ಲೂ ನನ್ನ ಕ್ಷೇತ್ರದಲ್ಲಿ ಬಹಳಷ್ಟು ಮತಗಳು ಡಿಲಿಟ್ ಆಗಿದೆ. ಜನ ತಮ್ಮ ಸ್ವಂತ ಊರುಗಳಲ್ಲಿ ಮತ ಇಟ್ಟುಕೊಳ್ಳುತ್ತಿದ್ದಾರೆ. ಕನ್ನಡಿಗರು ಎಲ್ಲಿದರೂ ಕನ್ನಡಿಗರೇ. ಎಲ್ಲಾದರೂ ಇರಲಿ ಮತದಾರರಾಗಿರಲಿ ಎಂದರು.

Key words: Central Minister, Shobha karndlaje, visit, Chamundi hills

The post ನಮ್ಮ ಸಂಸ್ಕೃತಿ, ಧರ್ಮ, ಆಚರಣೆ ಬಗ್ಗೆ ಯತೀಂದ್ರ ಹೋಗಿ ತನ್ನ ತಾಯಿ ಬಳಿ ಪ್ರಶ್ನೆ ಕೇಳಲಿ-ಶೋಭಾ ಕರಂದ್ಲಾಜೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹೊರಟ್ಟಿ ಹೃದಯ ವೈಶಾಲ್ಯತೆ ಶ್ಲಾಘನೀಯ: ಬದಲಿ ವ್ಯವಸ್ಥೆವರೆಗೂ ಅವರನ್ನೇ ಮುಂದುವರಿಸಲು ಶಿಫಾರಸ್ಸು- ಸಿಎಂ ಡಿಕೆಶಿ

ಬೆಂಗಳೂರು, ಆಗಸ್ಟ್,7,2026 (www.justkannada.in):  ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ...

ಸೆಂಟಮ್ ಎಲೆಕ್ಟ್ರಾನಿಕ್ಸ್ ನಿಂದ ನಾಲ್ಕು ವರ್ಷಗಳಲ್ಲಿ 500 ಕೋಟಿ ರೂ. ಹೂಡಿಕೆ-ಸಚಿವ ಎಂ. ಬಿ ಪಾಟೀಲ್

ಬೆಂಗಳೂರು,ಆಗಸ್ಟ್,7,2026 (www.justkannada.in):  ರಕ್ಷಣಾ ಉದ್ಯಮದಲ್ಲಿ ಹೆಸರು ಮಾಡಿರುವ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು...

ಆ.13ರ  ಬಂದ್ ಮುಂದೂಡುವುದು ಸೂಕ್ತ – ಕುರುಬೂರು ಶಾಂತಕುಮಾರ್

ಮೈಸೂರು,ಆಗಸ್ಟ್,7,2026 (www.justkannada.in):  ತಮಿಳುನಾಡಿಗೆ ನೀರು ಬಿಡುದಂತೆ ಆಗ್ರಹಿಸಿ ಆಗಸ್ಟ್ 13 ರಂದು...

ಎರಡು ದಿನ ಕಳೆದ್ರೆ ಎಲ್ಲರೂ ಸುಮ್ಮನಾಗ್ತಾರೆ- ಸಚಿವ ಪುಟ್ಟರಂಗಶೆಟ್ಟಿ

ಚಾಮರಾಜನಗರ,ಆಗಸ್ಟ್,7,2026 (www.justkannada.in):  ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವ ಸ್ಥಾನ ಕೈತಪ್ಪಿದ...