ಬೆಂಗಳೂರು,ಜೂನ್,9,2026 (www.justkannada.in): ನಟ್ಟು ಬೋಲ್ಟು ಟೈಟ್ ಮಾಡುತ್ತೇನೆ ಎಂದು ಹೇಳಿದರೇ ಚುನಾವಣೆ ವೇಳೆ ಜನ ನಿಮ್ಮ ನಟ್ಟು ಬೋಲ್ಟು ಟೈಟ್ ಮಾಡುತ್ತಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಗೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಲೇವಡಿ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಸಂಪುಟ ಖಾತೆ ಖ್ಯಾತೆ ಸರಿಪಡಿಸುವ ಜವಾಬ್ದಾರಿ ಸಿಎಂ, ಕಾಂಗ್ರೆಸ್ ನದ್ದು. ಇದರಿಂದ ರಾಜ್ಯದ ಆಡಳಿತದ ಮೇಲೆ ಅಡ್ಡ ಪರಿಣಾಮ ಬೀರುತ್ತೆ ನಟ್ಟು ಬೋಲ್ಟು ಟೈಟ್ ಮಾಢಿತ್ತೇನೆ ಎಂದು ಹೇಳಿದರೇ ಚುನಾವಣೆ ವೇಳೆ ಜನ ನಿಮ್ಮ ನಟ್ಟು ಬೋಲ್ಟು ಟೈಟ್ ಮಾಡುತ್ತಾರೆ ಎಂದರು. 
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಟೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಕಾಂಗ್ರೆಸ್ ಗೆ ಏಕೆ ಇದ್ದಕ್ಕಿದ್ದಂತೆ ಹೆಚ್ ಡಿಡಿ ಮೇಲೆ ಮರುಕ ಹುಟ್ಟಿದೆ? ನಾಟಕದ ಮಾತುಗಳಿಗೆ ಉತ್ತರಿಸಬೇಕಿಲ್ಲ. ಹೆಚ್ ಡಿಡಿ ಮೇಲೆ ಸಹಜವಾಗಿ ಪ್ರೀತಿ ವಾತ್ಸಲ್ಯ ಇದೆ. ಹೇಗೆ ಗೌರವಿಸಬೇಕು. ಅಂತಾ ಕಾಂಗ್ರೆಸ್ ನಿಂದ ಕಲಿಯಬೇಕಿಲ್ಲ. ನರಸಿಂಹರಾವ್, ಡಾ. ಮನ್ ಮೋಹನ್ ಸಿಂಗ್ ರನ್ನ ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ನೀವು ನಮಗೆ ಪಾಠ ಹೇಳುತ್ತೀರಾ? ಹೆಚ್ ಡಿಡಿ ಮೋದಿ ಸಂಬಂಧ ಅಣ್ಣ-ತಮ್ಮ , ತಂದೆ ಮಗನಿಗೆ ತೋರಿಸುವ ಗೌರವ ಎಂದರು.
Key words: People, nuts and bolts, elections, CM DK Shivakumar, MLC CT Ravi
The post ಚುನಾವಣೆ ವೇಳೆ ಜನ ನಿಮ್ಮ ನಟ್ಟು ಬೋಲ್ಟು, ಟೈಟ್ ಮಾಡ್ತಾರೆ-MLC ಸಿ.ಟಿ ರವಿ ಲೇವಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




