10
June, 2026

A News 365Times Venture

10
Wednesday
June, 2026

A News 365Times Venture

ಬಡವರ ಕಣ್ಣೀರಿನ ಮೇಲೆ ಮೋದಿ ಸರ್ಕಾರದಿಂದ ಮೊಸಳೆ ಕಣ್ಣೀರು- ಗ್ಯಾಸ್ ಬೆಲೆ ಹೆಚ್ಚಳಕ್ಕೆ ಖರ್ಗೆ ಕಿಡಿ

Date:

ಬೆಂಗಳೂರು,ಜೂನ್,9,2026 (www.justkannada.in): ಮನ್ರೇಗಾ  ಯೋಜನೆ ಹೆಸರು ಬದಲಾವಣೆ ಮತ್ತು ಗ್ಯಾಸ್ ಸಿಲಿಂಡರ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, 12 ವರ್ಷಗಳಲ್ಲಿ ಬಡತನ ನಿರ್ಮೂಲನಾ ಅಭಿಯಾನ ವಾಸ್ತವಿಕತೆ.  ಮೊದಲನೆಯದಾಗಿ ಮೋದಿ ಸರ್ಕಾರ ಬಡವರ ಕೆಲಸದ ಹಕ್ಕು ಕಿತ್ತು ಕೊಂಡಿದೆ. ಮನ್ರೇಗಾ ಯೋಜನೆಯಡಿ ಕೆಲಸ ಮಾಡುವ ಹಕ್ಕು ಕಸಿದುಕೊಳ್ಳುತ್ತಿದೆ.  2016ರಲ್ಲಿ ಉಜ್ವಲ ಯೋಜನೆಯಡಿ ಮಹಿಳೆಯರು ಸೌದೆ ಒಲೆ ಹೊಗೆಯಿಂದ ಮುಕ್ತರಾಗುತ್ತಾರೆ  ಎಂದು ಹೇಳಿದ್ದರು. ಪ್ರತಿ ವರ್ಷ 12 ಸಬ್ಸಿಡಿ ಸಿಲಿಂಡರ್ ಎಂಬ ಭರವಸೆ ಇತ್ತು. ಕಳೆದ ವರ್ಷ 12 ರಿಂದ 9ಕ್ಕೆ ಇಳಿಸಲಾಗಿದೆ. ಈ ವರ್ಷ ಸಬ್ಸಿಡಿ ಸಿಲಿಂಡರ್ ಗಳ ಸಂಖ್ಯೆ 4ಕ್ಕೆ ಇಳಿದಿದೆ.  ಅಂದರೆ 12ರ  ಭರವಸೆ ಆದರೆ ಉದ್ದೇಶ 4 ಎಂದು ಟೀಕಿಸಿದರು.

ಎಲ್ ಪಿಜಿ ಸಿಲಿಂಡರ್ ಬೆಲೆ ಪದೇ ಪದೇ ಹೆಚ್ಚಿಸಲಾಗಿದೆ. ತಾಯಂದಿರು ಸಹೋದರಿಯರು ಸಿಲಿಂಡರ್ ಗಳನ್ನ ತ್ಯಜಿಸಿ ಒಲೆಗಳನ್ನ ಅಳವಡಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಬಡವರ ಕಣ್ಣೀರಿನ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಮೋದಿ ಸರ್ಕಾರ ಅಧಿಕಾರದ ಅಮಲಿನಲ್ಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದಿದ್ದಾರೆ.

Key words: Modi government, tears, poor, Mallikarjuna Kharge

The post ಬಡವರ ಕಣ್ಣೀರಿನ ಮೇಲೆ ಮೋದಿ ಸರ್ಕಾರದಿಂದ ಮೊಸಳೆ ಕಣ್ಣೀರು- ಗ್ಯಾಸ್ ಬೆಲೆ ಹೆಚ್ಚಳಕ್ಕೆ ಖರ್ಗೆ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹಿರಿಯ ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣರಿಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ

ಮೈಸೂರು,ಜೂನ್,10,2026 (www.justkannada.in): ಕಳೆದ 45 ವರ್ಷಗಳಿಂದ ಪತ್ರಿಕಾ ಛಾಯಾಗ್ರಾಹಕರಾಗಿ ನಿರಂತರ ಸೇವೆ...

ಮೈಸೂರು:  ಫ್ಯಾಕ್ಟರಿಯಲ್ಲೇ ಡೆತ್ ನೊಟ್ ಬರೆದಿಟ್ಟು ಕಾರ್ಮಿಕ ಆತ್ಮಹತ್ಯೆಗೆ ಶರಣು

ಮೈಸೂರು,ಜೂನ್ 10,2026 (www.justkannada.in): ಕಾರ್ಮಿಕರೊಬ್ಬರು ಡೆತ್ ನೋಟ್ ಬರೆದಿಟ್ಟು ಕಾರ್ಕಾನೆಯಲ್ಲೇ ಆತ್ಮಹತ್ಯೆಗೆ...

ಮೆರಿಟಸ್ ಕಪ್ ರೇಸಿಂಗ್: ಆರವ್‌ ಗೆ ಚಾಂಪಿಯನ್ ಪಟ್ಟ, ಬೆಂಗಳೂರಿನ ಜಿದಾನ್ ಅನೀಸ್‌ ರನ್ನರ್-ಅಪ್

ಕೊಯಮತ್ತೂರು, ಜೂನ್, 10,2026 (www.justkannada.in):  ಹತ್ತು ವರ್ಷದ ಆರವ್ ಸುರೇಕಾ (ರಾಯೋ...

ನೂರು ದಿನಗಳಲ್ಲಿ ಕೆಐಎಡಿಬಿ ಸಂಪೂರ್ಣ ಡಿಜಿಟಲೀಕರಣ: ಸಚಿವ ಎಂ.ಬಿ ಪಾಟೀಲ್ ಕಟ್ಟುನಿಟ್ಟಿನ ಗಡುವು

ಬೆಂಗಳೂರು,ಜೂನ್,10,2026 (www.justkannada.in):  ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯ (ಕೆಐಎಡಿಬಿ) ಮೂಲಕ ನಡೆಯುವ...