ಮೈಸೂರು,ಜೂನ್,10,2026 (www.justkannada.in): ಪ್ರಧಾನಿಯಾಗಿ ನರೇಂದ್ರ ಮೋದಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮೋದಿಯವರ ಪರವಾಗಿ ಅಭಿನಂದನ ಜಾಥಾ, ದೇವಸ್ಥಾನದಲ್ಲಿ ವಿಶೇಷ ಅರ್ಚನೆ ಕಾರ್ಯಕ್ರಮಗಳು ನಡೆದವು.
ಶಾಸಕ ಶ್ರೀವತ್ಸ ನೇತೃತ್ವದಲ್ಲಿ ನಗರದ ಅಗ್ರಹಾರ ಸರ್ಕಲ್ ನಿಂದ 101 ಗಣಪತಿ ದೇವಸ್ಥಾನದವರೆಗೆ ಜಾಥಾ ನಡೆದಿದ್ದು, ಪ್ರಧಾನಿ ಮೋದಿ ಅವರ ಪರವಾಗಿ ಘೋಷಣೆ ಕೂಗಿ ಶುಭ ಹಾರೈಸಲಾಯಿತು. ಹಾಗೆಯೇ ನರೇಂದ್ರ ಮೋದಿಯವರ ಹೆಸರಿನಲ್ಲಿ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಅರ್ಚನೆ ಮಾಡಲಾಯಿತು.
ಬಳಿಕ ಮಾತನಾಡಿದ ಶಾಸಕ ಶ್ರೀವತ್ಸ, ಪ್ರಧಾನಿಯಾಗಿ ಮೋದಿಯವರು ದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದಾರೆ. ಭಾರತವನ್ನು ವಿಶ್ವ ಮಟ್ಟಕ್ಕೆ ಮೋದಿಯವರು ತೆಗೆದುಕೊಂಡು ಹೋಗಿದ್ದಾರೆ. ಮೋದಿಯವರಿಗೆ ಮುಂದೆ ಅಧಿಕಾರ ನಡೆಸುವುದಕ್ಕೆ ಹೆಚ್ಚು ಶಕ್ತಿ ಸಿಗಲಿ ಎಂದು ಇಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದೇವೆ. ಈ ದಿನದ ವಿಶೇಷವೆಂದರೆ ನಮ್ಮ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬೂತ್ ಗಳಲ್ಲಿಯೂ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತೇವೆ ಎಂದರು.
Key words: Modi, completes, 12 years, Prime Minister, special prayers, Mysore
The post ಪ್ರಧಾನಿಯಾಗಿ ಮೋದಿ 12 ವರ್ಷ: ಮೈಸೂರಿನಲ್ಲಿ ಅಭಿನಂದನಾ ಜಾಥಾ, ವಿಶೇಷ ಅರ್ಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




