2
June, 2026

A News 365Times Venture

2
Tuesday
June, 2026

A News 365Times Venture

ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ

Date:

ಬೆಂಗಳೂರು, ಜೂನ್,1,2026 (www.justkannada.in):  ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ ನ 7 ಸದಸ್ಯ ಸ್ಥಾನಕ್ಕೆ ನಡೆಯುವ ವಿಧಾನಪರಿಷತ್ ಚುನಾವಣೆಗೆ ಇಂದು ಅಧಿಸೂಚನೆ  ಪ್ರಕಟಿಸಲಾಗಿದೆ.

ವಿಧಾನಪರಿಷತ್‌ ನ ದ್ವೈವಾರ್ಷಿಕ ಚುನಾವಣೆಯ ಚುನಾವಣಾಧಿಕಾರಿ ಹಾಗೂ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಕ್ಷಿ ಅವರು ಅಧಿಸೂಚನೆ  ಪ್ರಕಟಿಸಿದ್ದು ಇಂದಿನಿಂದ ಜೂನ್ 8ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ಜೂನ್ 9 ರಂದು ನಾಮಪತ್ರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಸಿಂಧುವಾದ ನಾಮಪತ್ರಗಳ ಪ್ರಕಟಣೆ ಹೊರಡಿಸಲಾಗುತ್ತದೆ. ಜೂನ್ 11 ಉಮೇದುವಾರಿಕೆ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಜೂನ್ 18ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ವಿಧಾನಪರಿಷತ್‌ ಸದಸ್ಯರಾದ ಗೋವಿಂದರಾಜು, ಎಂಟಿಬಿ ನಾಗರಾಜ್‌, ಪ್ರತಾಪ್‌ ಸಿಂಹ ನಾಯಕ್‌ ಕೆ., ನಾಸಿರ್‌ ಅಹಮದ್‌, ತಿಪ್ಪಣ್ಣಪ್ಪ, ಸುನೀಲ್‌ ವಲ್ಯಾಪುರೆ, ಬಿ.ಕೆ.ಹರಿಪ್ರಸಾದ್‌ ಅವರು ಜೂನ್ 30 ರಂದು ನಿವೃತ್ತಿ ಹೊಂದಲಿದ್ದಾರೆ. ಇವರ ನಿವೃತ್ತಿಯಿಂದ ತೆರವಾಗುವ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

Key words: Notification, Legislative Council, MLC, elections

 

The post ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಾಮರಾಜನಗರದಲ್ಲಿ ಜಯದೇವದಿಂದ ವಾರಕ್ಕೊಮ್ಮೆ ಹೃದಯ ತಪಾಸಣೆಗೆ ಚಿಂತನೆ -ಡಾ. ಬಿ. ದಿನೇಶ್

ಮೈಸೂರು, ಜೂನ್,2,2026 (www.justkannada.in):  ಜಯದೇವ ಹೃದ್ರೋಗ ಸಂಸ್ಥೆಯಿಂದ ಚಾಮರಾಜನಗರ ವೈದ್ಯಕೀಯ ಕಾಲೇಜು...

IPLಗೂ ಡಾ. ರಾಜ್ ಕುಟುಂಬಕ್ಕೂ ವಿಶೇಷ ನಂಟು? ಕಾಕತಾಳೀಯವಾದರೂ ಕುತೂಹಲ ಮೂಡಿಸಿದ ಸಂಗತಿಗಳು!

  ಬೆಂಗಳೂರು, ಜೂ.೦೨,೨೦೨೬: ಕ್ರಿಕೆಟ್ ಅಭಿಮಾನಿಗಳ ಹಬ್ಬವೆಂದೇ ಕರೆಯಲಾಗುವ ಐಪಿಎಲ್‌ ಟ್ರೋಫಿ ಗೆಲುವಿನ...

ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಷರತ್ತುಗಳನ್ನು ಸರಳೀಕರಣ ಮಾಡಿ ಆದೇಶ: KUWJ ಸ್ವಾಗತ

ಬೆಂಗಳೂರು,ಜೂನ್,2,2026 (www.justkannada.in):  ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ...

“ಗಂಭೀರ ನೋಟ, ಸರಳ ಉಡುಗೆ: ನಟ ದರ್ಶನ್ ಅವರ ಹೊಸ ಫೋಟೋ ವೈರಲ್”

ಬೆಂಗಳೂರು,ಜೂನ್,3,2026 (www.justkannada.in):  ಕನ್ನಡ ಚಿತ್ರರಂಗದ ನಟ ದರ್ಶನ್ ಅವರ ಹೊಸ ಫೋಟೋ...