8
June, 2026

A News 365Times Venture

8
Monday
June, 2026

A News 365Times Venture

ಸರ್ಕಾರಿ ಕೆಲಸ ಕೊಡಿಸುವುದಾಗಿ 5.35 ಕೋಟಿ ರೂ. ವಂಚನೆ: ಅಪ್ಪ ಮಗಳು ಅಂದರ್

Date:

ಬೆಂಗಳೂರು,ಜೂನ್,8,2026 (www.justkannada.in):  ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 45 ಜನರಿಂದ ಹಣ ಪಡೆದು  ವಂಚಿಸಿದ್ದ ಅಪ್ಪಮಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಶಂಶಾದ್ ಬೇಗಂ,  ಮನ್ಸೂರ್  ಬಂಧಿತ ಅಪ್ಪ ಮಗಳು.  ಕೇಂದ್ರ ರಾಜ್ಯ ಸರ್ಕಾರದಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ 45 ಜನರಿಂದ ಸುಮಾರು 5.35 ಕೋಟಿ ರೂ. ಹಣ ಪಡೆದು ಆರೋಪಿಗಳು ವಂಚಿಸಿದ್ದರು ಎನ್ನಲಾಗಿದೆ. ಉತ್ತರ ಕರ್ನಾಟಕ ಮೂಲದ 45 ಜನರಿಂದ ಹಣ ಪಡೆದು ವಂಚನೆ ಮಾಡಿದ್ದರು ಎನ್ನಲಾಗಿದೆ.

ಇಬ್ಬರು ಆರೋಪಿಗಳು ನಂಬಿಸಿ  ನಿರುದ್ಯೋಗಿಗಳ ಸಂಪರ್ಕ ಮಾಡಿ ಅಧಿಕಾರಿಗಳು, ರಾಜಕಾರಣಿಗಳು  ಪರಿಚಯ ಎಂದು ನಂಬಿಸಿ ಬಳಿಕ ರೈಲ್ವೆ, ಆದಾಯ ತೆರಿಗೆ ಇಲಾಖೆ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆಯುತ್ತಿದ್ದರು.  ಬಳಿಕ ನಕಲಿ ನೇಮಕಾತಿ ಪತ್ರ ನೀಡುತ್ತಿದ್ದರು. ಈ ಮಧ್ಯೆ ಬೆಂಗಳೂರು ಕೋಲ್ಕತ್ತಾ ಮುಂಬೈನಲ್ಲಿ ಟ್ರೈನಿಂಗ್ ಸೆಂಟರ್ ತೆರೆದು ಟ್ರೈನಿಂಗ್ ನೀಡಿ 4 ತಿಂಘಳ ಸಂಬಳವನ್ನೂ ನೀಡಿದ್ದರು.

ನಂತರ ಸಂಬಳ ಕೆಲಸ ಎರಡೂ ಮೋಸ ಎಂಬುದು ದೃಢವಾಗಿದ್ದು,  ವಿಷಯ ಗೊತ್ತಾಗಿ  ಮೋಸಹೋದ ನಿರುದ್ಯೋಗಿಗಳು ಸಿಸಿಬಿಗೆ ದೂರು ನೀಡಿದ್ದರು.  ಕೇಸ್ ದಾಖಲಿಸಿಕೊಂಡು ಇದೀಗ ಸಿಸಿಬಿ ಪೊಲೀಸರು ಶಂಶಾದ್ ಬೇಗಂ,  ಮನ್ಸೂರ್ ಇಬ್ಬರನ್ನು ಬಂಧಿಸಿದ್ದಾರೆ.  ಬೆಂಗಳೂರು ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರೆದಿದೆ.

Key words: Father, daughter, cheated, Arrest, government job

The post ಸರ್ಕಾರಿ ಕೆಲಸ ಕೊಡಿಸುವುದಾಗಿ 5.35 ಕೋಟಿ ರೂ. ವಂಚನೆ: ಅಪ್ಪ ಮಗಳು ಅಂದರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಾಸಕರ ಕಚೇರಿ ಎಡವಟ್ಟು: ಸಂತಾಪ ಸೂಚಿಸುವ ಪೋಸ್ಟರ್‌ನಲ್ಲಿ ಪ್ರಮಾದ..?

  ಬೆಂಗಳೂರು, ಜೂ.೦೮,೨೦೨೬: ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ರಾಜ್ಯ ಗ್ಯಾರಂಟಿ...

ಹೆಚ್ ಡಿ ದೇವೇಗೌಡರಿಗೆ ಟಿಕೆಟ್ ಕೈತಪ್ಪಿದ್ದು ರಾಜ್ಯಕ್ಕೆ ಬಿಜೆಪಿ ಮಾಡಿದ ಅಪಮಾನ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ಜೂನ್,8,2026 (www.justkannada.in):  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭೆ ನೀಡದಿರುವುದು...

ಕರ್ನಾಟಕದ ಧ್ವನಿಯಾಗಿ HD ದೇವೇಗೌಡರನ್ನ ರಾಜ್ಯಸಭೆಗೆ ಕಳುಹಿಸಿ- ಶಾಸಕ ಯತ್ನಾಳ್ ಆಗ್ರಹ

ರಾಮನಗರ,ಜೂನ್,8,2026 (www.justkannada.in):  ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ...

ಮೈಸೂರಿನಲ್ಲಿ ಅಕ್ರಮ ಗಾಂಜಾ ಸಾಗಾಣೆ: ನಾಲ್ವರ ಬಂಧನ

ಮೈಸೂರು,ಜೂನ್,8,2026 (www.justkannada.in): ಮೈಸೂರು ನಗರ ಪೊಲೀಸರಿಂದ ಮಾದಕ ವಸ್ತುಗಳ ವಿರುದ್ಧ ವಿಶೇಷ...