ಬೆಂಗಳೂರು, ಜೂ.೦೮,೨೦೨೬: ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗಡೆ ಅವರ ನಿಧನಕ್ಕೆ ಸಂತಾಪ ಸೂಚಿಸುವ ವೇಳೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಿಂದ ಎಡವಟ್ಟು ನಡೆದಿದೆ..?
ಸೂರಜ್ ಹೆಗಡೆ ಅವರ ಅಕಾಲಿಕ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಪ್ರಕಟಿಸಲಾದ ಪೋಸ್ಟರ್‌ನಲ್ಲಿ “Sad Demise” ಎಂಬ ಪದ ಬಳಕೆಯಾಗಬೇಕಿದ್ದ ಸ್ಥಳದಲ್ಲಿ “Sad Dismiss” ಎಂದು ಮುದ್ರಣವಾಗಿರುವುದು ಗಮನ ಸೆಳೆದಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತಾಪ ಸೂಚಿಸುವ ಪೋಸ್ಟರ್‌ನಲ್ಲೇ ಇಂತಹ ಭಾಷಾ ದೋಷ ಕಂಡುಬಂದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.
ಪೋಸ್ಟರ್ ಪ್ರಕಟವಾದ ಬೆನ್ನಲ್ಲೇ ನೆಟ್ಟಿಗರು ತಪ್ಪನ್ನು ಗುರುತಿಸಿ ಕಾಮೆಂಟ್‌ಗಳ ಮೂಲಕ ಗಮನ ಸೆಳೆದಿದ್ದು, ಹಲವು ಮಂದಿ ಶಾಸಕರ ಕಚೇರಿಯ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ. ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಪೋಸ್ಟರ್‌ಗಳನ್ನು ಸೂಕ್ತವಾಗಿ ಪರಿಶೀಲಿಸದೆ ಪ್ರಕಟಿಸಿರುವುದು ಈ ಎಡವಟ್ಟಿಗೆ ಕಾರಣ ಎನ್ನಲಾಗುತ್ತಿದೆ.

ಸೂರಜ್ ಹೆಗಡೆ ಅವರ ನಿಧನಕ್ಕೆ ರಾಜ್ಯದ ರಾಜಕೀಯ ನಾಯಕರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂತಾಪ ಸೂಚಿಸುತ್ತಿರುವ ನಡುವೆಯೇ, ಗಾಂಧಿನಗರ ಶಾಸಕರ ಕಚೇರಿಯಿಂದ ಪ್ರಕಟವಾದ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
Key words: A condolence poster, released, Gandhinagar Assembly Constituency, MLA’s office, Bengaluru, sparked controversy

English Summary:
A condolence poster released by the Gandhinagar Assembly Constituency MLA’s office in Bengaluru has sparked controversy due to a glaring spelling mistake. The poster was put up to pay tribute to late AICC Secretary and KPCC Vice-President Suraj Hegde, who recently passed away following a cardiac arrest. However, instead of using the phrase “Sad Demise”, the poster mistakenly carried the words “Sad Dismiss.”

The error quickly drew attention on social media, with many users criticizing the lack of proofreading in an official condolence message. The incident has triggered embarrassment for the MLA’s office and become a topic of discussion online. The mistake occurred during a solemn tribute to the late Congress leader, turning what was intended as a message of condolence into a public relations blunder.

The post ಶಾಸಕರ ಕಚೇರಿ ಎಡವಟ್ಟು: ಸಂತಾಪ ಸೂಚಿಸುವ ಪೋಸ್ಟರ್‌ನಲ್ಲಿ ಪ್ರಮಾದ..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




