ಬೆಂಗಳೂರು, ಜೂನ್,8,2026 (www.justkannada.in): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಸಂಪುಟದ ನೂತನ 13 ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದ್ದು ಸಚಿವ ರಾಮಲಿಂಗರೆಡ್ಡಿ ಅವರಿಗೆ ನಾಲ್ಕುಕೊಠಡಿಗಳನ್ನ ನೀಡಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇಂದು ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸಚಿವರಿಗೆ ಕೊಠಡಿ ಹಂಚಿಕೆ ಮಾಡಿರುವ ಕುರಿತು ಆದೇಶ ಹೊರಡಿಸಿದೆ. ಈ ಪೈಕಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. 335, 336, 337, 337A ಕೊಠಡಿಗಳನ್ನು ರಾಮಲಿಂಗರೆಡ್ಡಿ ಅವರಿಗೆ ಹಂಚಿಕೆ ಮಾಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದಕ್ಕೆ ರಾಮಲಿಂಗರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಈ ಹಿಂದೆ ಡಿಸಿಎಂ ಆಗಿದ್ದಾಗ ಡಿ.ಕೆ.ಶಿವಕುಮಾರ್ ಬಳಸುತ್ತಿದ್ದ ಕಚೇರಿ ರಾಮಲಿಂಗಾರೆಡ್ಡಿಗೆ ನೀಡಿದ್ದಾರೆ. ಆ ಕಚೇರಿಯನ್ನ ಡಿಕೆ ಶಿವಕುಮಾರ್ ಅವರು ಸಿಎಂ ಕಚೇರಿಯಂತೆ ನವೀಕರಣ ಮಾಡಿಸಿದ್ದರು.
ಸಚಿವರಿಗೆ ಹಂಚಿಕೆಯಾದ ಕೊಠಡಿಗಳ ವಿವರ ಹೀಗಿದೆ…
ಪರಮೇಶ್ವರ್ ಉಪ ಮುಖ್ಯಮಂತ್ರಿ (ಕಂದಾಯ ಮತ್ತು ಯುವಸಬಲೀಕರಣ) – ವಿಧಾನಸೌಧ 327/327a
ಕೆ.ಎಚ್ ಮುನಿಯಪ್ಪ, (ಆಹಾರ ಸಚಿವ)- ವಿಧಾನಸೌಧ – 340a/341/341a
ಯತೀಂದ್ರ ಸಿದ್ದರಾಮಯ್ಯ, (ನಗರಾಭಿವೃದ್ಧಿ ಸಚಿವ) – ವಿಧಾನಸೌಧ, 314/314a
ಕೆಜೆ ಜಾರ್ಜ್ (ಇಂಧನ ಮತ್ತು ಪ್ರವಾಸೋದ್ಯುಮ) – ವಿಧಾನಸೌಧ, 317/317a
ಎಂಬಿ ಪಾಟೀಲ್, (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ) – ವಿಧಾನಸೌಧ – 344/344a
ರಾಮಲಿಂಗಾರೆಡ್ಡಿ, (ಜಲಸಂಪನ್ಮೂಲ ಸಚಿವ) – ವಿಧಾನಸೌಧ, 335/336/337/337a
ಕೃಷ್ಣ ಬೈರೇಗೌಡ, ಸಚಿವ -(ಬೆಂಗಳೂರು ನಗರಾಭಿವೃದ್ಧಿ ಸಚಿವ) ವಿಕಾಸಸೌಧ, 244/245
ಪ್ರಿಯಾಂಕ್ ಖರ್ಗೆ, (ಗೃಹ ಇಲಾಖೆ ಮತ್ತು ಐಟಿಬಿಟಿ) – ವಿಕಾಸ ಸೌಧ, 242, 243
ಯುಟಿ ಖಾದರ್, (ಆರೋಗ್ಯ ಸಚಿವ) – ವಿಧಾನಸೌಧ, 315/315a
ಬೈರತಿ ಸುರೇಶ್, (ಸಾರಿಗೆ ಸಚಿವ) – ವಿಧಾನಸೌಧ, 316/316a
ಸತೀಶ್ ಜಾರಕಿಹೊಳಿ, (ಲೋಕೋಪಯೋಗಿ ಸಚಿವ) – ವಿಕಾಸಸೌಧ, 444/445
ಈಶ್ವರ್ ಖಂಡ್ರೆ, (ಗ್ರಾಮೀಣಾಭಿವೃದ್ಧಿ ಸಚಿವ) – ವಿಕಾಸಸೌಧ, 36/37
ಶರಣಪ್ರಕಾಶ್ ಪಾಟೀಲ್, (ವೈದ್ಯಕೀಯ ಶಿಕ್ಷಣ ಸಚಿವ) – ವಿಕಾಸಸೌಧ. 344/345
Key words: Allotment, rooms, 13 ministers, Vidhana Soudha
The post 13 ಸಚಿವರಿಗೆ ಕೊಠಡಿಗಳ ಹಂಚಿಕೆ: ರಾಮಲಿಂಗಾರೆಡ್ಡಿ ಅವರಿಗೆ ಬಂಪರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




