ಬೆಂಗಳೂರು,ಜೂನ್,11,2026 (www.justkannada.in): ಹೈಕಮಾಂಡ್ ನಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಹೀಗಾಗಿ ಖಂಡಿತ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ನಾರಾಯಣಸ್ವಾಮಿ, ಮೂರು ಜಿಲ್ಲೆಗಳಲ್ಲಿ ಹಿರಿಯರು ಸಮುದಾಯದ ಮುಖಂಡರಿಂದ ಒತ್ತಾಯ ಮಾಡಲಾಗುತ್ತಿದೆ. ಜಿಲ್ಲೆಯ ಶಾಸಕರು ನನ್ನ ಮಂತ್ರಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ಹೈಕಮಾಂಢ್ ನಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಸಿಎಂ ಡಿಸಿಎಂ ಅಭಿನಂದನೆ ಸಲ್ಲಿಸಲು ದೆಹಲಿಗೆ ಹೋಗಿದ್ದಾರೆ. ಏನೇ ಇದ್ದರೂ ಜೂನ್ 18ರ ಬಳಿಕ ಆಗುತ್ತದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ, ಡಿಸಿಎಂ ಸೇರಿ 2ನೇ ಪಟ್ಟಿ ಬಗ್ಗೆ ತೀರ್ಮಾನ ಮಾಡುತ್ತಾರೆ. ಇವತ್ತು ಏನು ಫೈನಲ್ ಆಗಲ್ಲ ಅಂತ ಅನಿಸುತ್ತೆ ಎಂದು ನಾರಾಯಣಸ್ವಾಮಿ ತಿಳಿಸಿದರು.
2019ರಲ್ಲಿ ನನಗೆ ಬಿಜೆಪಿಯಿಂಧ ಆಫರ್ ಬಂದಿತ್ತು
2019ರಲ್ಲಿ ನನಗೆ ಬಿಜೆಪಿಯಿಂಧ ಆಫರ್ ಬಂದಿತ್ತು. ಬಿಜೆಪಿಗೆ ಬನ್ನಿ ನಿಮ್ಮನ್ನ ಮಂತ್ರಿ ಮಾಡುತ್ತೇವೆ ಎಂದು ಆಫರ್ ಇತ್ತು. ಅವತ್ತು ಕೂಡ ನಾವು ಯಾರೂ ಬಿಜೆಪಿಗೆ ಹೋಗಲಿಲ್ಲ. ಪಕ್ಷಕ್ಕಾಗಿ 30 ವರ್ಷ ದುಡಿದಿದ್ದೇವೆ. ಕೂಲಿ ಕೇಳಿವುದರಲ್ಲಿ ತಪ್ಪಿಲ್ಲ. ಅದ್ದರಿಂದ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಶಾಸಕ ನಾರಾಯಣಸ್ವಾಮಿ ತಿಳಿಸಿದರು.
Key words: high command, ministerial position , Congress, MLA
The post ಹೈಕಮಾಂಡ್ ನಿಂದ ಸಕಾರಾತ್ಮಕ ಸ್ಪಂದನೆ: ಖಂಡಿತ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ- ‘ಕೈ’ ಶಾಸಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




