23
August, 2026

A News 365Times Venture

23
Sunday
August, 2026

A News 365Times Venture

3.85 ಕೋಟಿ ರೂ, ವಂಚನೆ ಆರೋಪ: ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ದ ದೂರು

Date:

ಬೆಂಗಳೂರು,ಆಗಸ್ಟ್,22,2026 (www.justkannada.in):   ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರ ವಿರುದ್ದ 3.85 ಕೋಟಿ ರೂ, ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ದೂರು ದಾಖಲಾಗಿದೆ.

ಸಿನಿಮಾ ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಭಾಸ್ಕರ್ ಶೆಟ್ಟಿ  ಸೇರಿ ನಾಲ್ವರು ಓಂ ಪ್ರಕಾಶ್ ರಾವ್ ಅವರ ವಿರುದ್ದ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಬೆಂಗಳೂರು ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿದೆ.

‘ಫಿನಿಕ್ಸ್’ ಎಂಬ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಓಂ ಪ್ರಕಾಶ್ ರಾವ್ ಅವರು ಭಾಸ್ಕರ್ ಶೆಟ್ಟಿ ಅವರಿಂದ ಒಟ್ಟು 3 ಕೋಟಿ 85 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಕೇವಲ ಆರು ತಿಂಗಳೊಳಗೆ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಓಂ ಪ್ರಕಾಶ್ ಭರವಸೆ ನೀಡಿದ್ದರು. ಆದರೆ, ವ್ಯವಹಾರ ನಡೆದು ಮೂರು ವರ್ಷ ಕಳೆದರೂ ಹಣ ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಾಗೆಯೇ  ‘ಹಣ ವಾಪಸ್ ಕೇಳಿದಾಗಲೆಲ್ಲಾ ನಿರ್ದೇಶಕ ಓಂಪ್ರಕಾಶ್ ರಾವ್ ಅವರು  ವಿವಿಧ ಕಾರಣಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ಅವರು ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ನನಗೆ ಸೇರಿದ ಹಣವನ್ನು ಕೇಳಲು ಓಂ ಪ್ರಕಾಶ್ ಅವರ ಮನೆಗೆ ತೆರಳಿದ್ದಾಗ, ಅಲ್ಲಿ ಬೆದರಿಕೆ ಹಾಕಲಾಗಿದೆ ಎಂದು ದೂರುದಾರ ಭಾಸ್ಕರ್ ಶೆಟ್ಟಿ ಆರೋಪಿಸಿದ್ದಾರೆ.

Key words: alleged, fraud,Complaint, against, director, Om Prakash Rao

The post 3.85 ಕೋಟಿ ರೂ, ವಂಚನೆ ಆರೋಪ: ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ದ ದೂರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತಮಿಳುನಾಡಿಗೆ ನೀರು: ಕಬಿನಿ ಡ್ಯಾಂ ಬಳಿ ರೈತರ ಪ್ರತಿಭಟನೆ, ಮುತ್ತಿಗೆಗೆ ಯತ್ನ

ಮೈಸೂರು,ಆಗಸ್ಟ್,22,2026 (www.justkannada.in):  ತಮಿಳುನಾಡಿಗೆ ನಿತ್ಯ ನೀರು ಹರಿಸುವ ಮೂಲಕ ಕಾವೇರಿ ನೀರು...

KSOU ಬಿಒಎಂ ನೇಮಕಕ್ಕೆ ರಾಜಕೀಯ ಲೆಕ್ಕಾಚಾರ : ಸಾಮಾಜಿಕ ನ್ಯಾಯದ ಸಮೀಕರಣದಲ್ಲಿ ತಿಮ್ಮಯ್ಯ–ಶಿವಕುಮಾರ್ ಹೆಸರು!

ಮೈಸೂರು, ಆ.೨೨,೨೦೨೬: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್‌...

ಬಗೆದಷ್ಟು ಬಯಲಿಗೆ ‘ಚಿನ್ನತಂಬಿ’ಯ ಕರ್ಮಕಾಂಡ: ಮತ್ತೆರೆಡು FIR ದಾಖಲು

ಮೈಸೂರು,ಆಗಸ್ಟ್,22,2026 (www.justkannada.in): ಚಿನ್ನ ಗಿರವಿ ಇಟ್ಟುಕೊಂಡು ನೂರಾರು ಗ್ರಾಹಕರಿಗೆ ವಂಚಿಸಿರುವ ಸುಂದರ್‌...

IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆ

ಬೆಂಗಳೂರು, ಆಗಸ್ಟ್, 22,2026 (www.justkannada.in):   ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ...