ಬೆಂಗಳೂರು,ಜೂನ್,10,2026 (www.justkannada.in): ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನವಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ 6ರಿಂದ 8 ವರ್ಷ ಕೆಲಸ ಮಾಡಿದ್ದಾರೆ. ಪರಮೇಶ್ವರ್ ಡಿಸಿಎಂ ಆಗಿರೋದು ಸಂತೋಷ ತಂದಿದೆ. ಏನೋ ಮಾನದಂಡಗಳು ಇರುತ್ತವೆ ಎಂದರು.
ಸಾಕಷ್ಟು ಕೆಲಸ ಮಾಡಿದ್ದೇನೆ. ಮುಂದುವರೆಸಿಕೊಂಡು ಹೋಗುತ್ತೇನೆ. ಉಳಿದ 2 ವರ್ಷದಲ್ಲಿ ಶೇ 30, 35ರಷ್ಟು ಕೆಲಸ ಮಾಡಿದರೇ ನನ್ನ ಇಲಾಖೆಯಲ್ಲಿ ಶೇ 85ರಷ್ಟು ಕೆಲಸ ಆಗುತ್ತೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ 5ನೇ ಅಭ್ಯರ್ಥಿ ಹಾಕಿರುವ ವಿಚಾರ ಯಾವುದೇ ಆತಂಕವಿಲ್ಲ ಐದೂ ಅಭ್ಯರ್ಥಿ ಗಳು ಗೆಲ್ಲುತ್ತಾರೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
Key words: not, upset, losing, DCM post, Minister, M.B. Patil
The post ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನ ಇಲ್ಲ-ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




