14
April, 2026

A News 365Times Venture

14
Tuesday
April, 2026

A News 365Times Venture

MYSORE; ವಿಶ್ವವಿಖ್ಯಾತ KRS ನಲ್ಲಿ UPI ಇನ್ನೂ “ನಗದು”..!

Date:

 

ಮೈಸೂರು, ಏಪ್ರಿಲ್ 14: ವಿಶ್ವಪ್ರಸಿದ್ಧ ಕೆ.ಆರ್.ಎಸ್.‌ ಬೃಂದಾವನ (KRS Brindavan Gardens) ದಲ್ಲಿ ಡಿಜಿಟಲ್ ಯುಗದಲ್ಲಿಯೂ “ಕ್ಯಾಶ್ ಮಾತ್ರ” ನಿಯಮ ಮುಂದುವರಿಯುತ್ತಿರುವುದು ಪ್ರವಾಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರವೇಶ ಟಿಕೆಟ್ ಪಡೆಯಲು ಬರುವವರಿಗೆ “ ನಗದು”  ಪಾವತಿ ಕಡ್ಡಾಯವಾಗಿದ್ದು, UPI ಅಥವಾ ಆನ್‌ಲೈನ್ ಪಾವತಿ ವ್ಯವಸ್ಥೆ ನಿರಂತರವಾಗಿ ಲಭ್ಯವಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕೆಲವೊಮ್ಮೆ ಸ್ಕ್ಯಾನ್ ಮೂಲಕ ಪಾವತಿ ಸೌಲಭ್ಯ ಇದ್ದರೂ ಅದು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಪ್ರವಾಸಿಗರು ದೂರಿದ್ದಾರೆ.

ದೂರದೂರಿನಿಂದ ಬರುವ ಪ್ರವಾಸಿಗರು ಕ್ಯಾಶ್ ಇಲ್ಲದೆ ಬಂದರೆ ಗೇಟ್ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ATM ಹುಡುಕುತ್ತಾ ಅಲೆದಾಡುವ ಪರಿಸ್ಥಿತಿ ಎದುರಾಗುತ್ತಿದ್ದು, ಕುಟುಂಬ ಸಮೇತರಾಗಿ ಬರುವವರಿಗೆ ಹೆಚ್ಚಿನ ತೊಂದರೆ ಉಂಟಾಗಿದೆ.

ಭಾರತದಲ್ಲಿ UPI ವ್ಯವಹಾರ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಮಯದಲ್ಲಿ, ಕರ್ನಾಟಕದ ಪ್ರಮುಖ ಪ್ರವಾಸಿ ತಾಣದಲ್ಲೇ ಡಿಜಿಟಲ್ ಪಾವತಿ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗದಿರುವುದು ಪ್ರಶ್ನೆ ಎಬ್ಬಿಸಿದೆ.

ಇದಕ್ಕೆ ಮುಖ್ಯ ಕಾರಣಗಳಾಗಿ KRS ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ, ಹಳೆಯ ಮ್ಯಾನುಯಲ್ ಟಿಕೆಟ್ ವ್ಯವಸ್ಥೆ, ಹಾಗೂ ನಿರ್ವಹಣಾ ವಿಳಂಬಗಳನ್ನು ಉಲ್ಲೇಖಿಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು, ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಬೇಕೆಂಬ ಒತ್ತಾಯ ಕೇಳಿಬಂದಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ KRS ಗೆ ಭೇಟಿ ನೀಡುವವರು ನಗದು ಹಣವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬುದು ವಾಸ್ತವ ಸ್ಥಿತಿಯಾಗಿದೆ.

ಪಾರ್ಕಿಂಗ್ ಗೊಂದಲ:

 ಫಾಸ್ಟ್ ಟ್ಯಾಗ್ ಶುಲ್ಕ ವಸೂಲಿ, ಆದರೆ ಮಾರ್ಗದರ್ಶನ ಶೂನ್ಯ!

ಮೈಸೂರು: ವಿಶ್ವಪ್ರಸಿದ್ಧ  ಬೃಂದಾವನ (Krishna Raja Sagara Dam)  ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ಅವ್ಯವಸ್ಥೆ ದಿನೇದಿನೇ ತೀವ್ರವಾಗುತ್ತಿದೆ. ಪ್ರವೇಶ ದ್ವಾರದಲ್ಲೇ ಫಾಸ್ಟ್ ಟ್ಯಾಗ್ ಮೂಲಕ ಶುಲ್ಕ ವಸೂಲಿ ಮಾಡಲಾಗುತ್ತಿದ್ದರೂ, ವಾಹನಗಳನ್ನು ಎಲ್ಲಿಗೆ ಕೊಂಡೊಯ್ಯಬೇಕು, ಎಲ್ಲಿ ನಿಲ್ಲಿಸಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟ ಸೂಚನೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿ ದಿನ ಸಾವಿರಾರು ಪ್ರವಾಸಿಗರು KRS ಮತ್ತು ಬೃಂದಾವನ ಗಾರ್ಡನ್‌ಗೆ ಭೇಟಿ ನೀಡುತ್ತಾರೆ. ಆದರೆ ಪ್ರವೇಶದ ಬಳಿ ಯಾವುದೇ ಮಾಹಿತಿ ಫಲಕಗಳಿಲ್ಲ, ಮಾರ್ಗದರ್ಶನ ನೀಡುವ ಸಿಬ್ಬಂದಿಯೂ ನಿಯೋಜನೆಗೊಂಡಿಲ್ಲ. ಪರಿಣಾಮವಾಗಿ, ವಾಹನಗಳು ಅಸ್ತವ್ಯಸ್ತವಾಗಿ ನಿಲ್ಲಿಸಲಾಗುತ್ತಿದ್ದು, ಟ್ರಾಫಿಕ್ ಜಾಮ್ ಮತ್ತು ಅವ್ಯವಸ್ಥೆ ಸಾಮಾನ್ಯವಾಗಿದೆ.

ವಾಹನ ನಿಲುಗಡೆ ಸ್ಥಳವು ವಿಶಾಲವಾಗಿದ್ದರೂ, ಸಮರ್ಪಕ ಯೋಜನೆ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಅದರ ಸದುಪಯೋಗವಾಗುತ್ತಿಲ್ಲ. ಪ್ರವಾಸಿಗರು ಅನಿವಾರ್ಯವಾಗಿ ರಸ್ತೆಯ ಬದಿಗಳಲ್ಲಿ ಅಥವಾ ಅನುಮತಿ ಇಲ್ಲದ ಸ್ಥಳಗಳಲ್ಲಿ ವಾಹನ ನಿಲ್ಲಿಸುವಂತಾಗಿದೆ.

ಸ್ಥಳೀಯರು ಮತ್ತು ಪ್ರವಾಸಿಗರು ಒಟ್ಟಾಗಿ, “ಶುಲ್ಕ ಪಡೆಯುವ ವ್ಯವಸ್ಥೆ ಇದೆ, ಆದರೆ ಮೂಲಭೂತ ಸೌಲಭ್ಯಗಳಿಲ್ಲದಿರುವುದು ಹೇಗೆ?” ಎಂದು ಪ್ರಶ್ನಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು, ಸ್ಪಷ್ಟ ದಿಕ್ಕು ಸೂಚನೆ ಫಲಕಗಳು, ಸಿಬ್ಬಂದಿ ನಿಯೋಜನೆ ಮತ್ತು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Key words: KRS, Brindavan Garden, facing inconvenience, entry tickets, cash-only, NO UPI , digital payments,

SUMMARY:

Mysuru, April 13: Visitors to the world-famous KRS Brindavan Gardens are facing inconvenience as entry tickets are largely cash-only, with UPI and digital payments not reliably available.

Tourists allege that despite India’s rapid shift towards digital transactions, the ticket counters here still depend on cash. In many cases, those arriving without cash are denied entry and forced to search for ATMs.

Officials cite reasons such as poor network connectivity, manual ticketing systems, and delays in upgrading infrastructure. Visitors have urged authorities to implement a fully functional digital payment system at the earliest.

Parking Chaos at KRS Despite FASTag Fee Collection

Mysuru: At Krishna Raja Sagara Dam, visitors face severe parking mismanagement. While entry fees are collected via FASTag at the gate, there is no guidance on where to park, no signboards, and no staff to assist.

Despite having a large parking area, poor planning leads to confusion, traffic congestion, and vehicles being parked randomly. With thousands visiting daily, tourists are questioning why fees are collected without basic facilities.

The post MYSORE; ವಿಶ್ವವಿಖ್ಯಾತ KRS ನಲ್ಲಿ UPI ಇನ್ನೂ “ನಗದು”..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೇಂದ್ರದ ಜಿಡಿಪಿಗಿಂತ ರಾಜ್ಯದ GDP ಉತ್ತಮ ಎಂದ ಸಿಎಂಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ HDK

ಬೆಂಗಳೂರು,ಏಪ್ರಿಲ್,14,2026 (www.justkannada.in): ಕೇಂದ್ರ ಸರ್ಕಾರದ ಜಿಡಿಪಿಗಿಂತ ರಾಜ್ಯದ ಜಿಡಿಪಿ ಉತ್ತಮವಾಗಿದೆ ಎಂದು...

ವಚನಾನಂದ ಸ್ವಾಮೀಜಿ ವಿರುದ್ದ ಪೋಕ್ಸೋ ಕೇಸ್ ದಾಖಲಿಸಬೇಕಿತ್ತು- ಮಠದ ಟ್ರಸ್ಟ್ ಸದಸ್ಯ ಗಂಭೀರ ಆರೋಪ

ದಾವಣಗೆರೆ,ಏಪ್ರಿಲ್,14,2026 (www.justkannada.in): ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹನಗವಾಡಿಯ ಪಂಚಮಸಾಲಿ ಗುರುಪೀಠದಿಂದ...

ಖರ್ಗೆ ಮುಂದೆ ನಮ್ಮ ಬೇಡಿಕೆ ಇಟ್ಟಿದ್ದೇವೆ: ರಾಹುಲ್ ಗಾಂಧಿ ಭೇಟಿಗೆ ಯತ್ನ- ಶಾಸಕ ಟಿ.ಬಿ ಜಯಚಂದ್ರ

ನವದಹಲಿ,ಏಪ್ರಿಲ್,14,2026 (www.justkannada.in):   ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸಿ  ಹೈಕಮಾಂಡ್ ಭೇಟಿ ಮಾಡಲು...

ಮುಂದಿನ ದಿನಗಳಲ್ಲಿ ಸಮಸ್ಯೆ ಸಾಧ್ಯತೆ: ಇತಿಮಿತಿಯಲ್ಲಿ ಸಿಲಿಂಡರ್ ಬಳಸಿ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಏಪ್ರಿಲ್,13,2026 (www.justkannada.in): ಗ್ಯಾಸ್ ಸಿಲಿಂಡರ್ ಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ...