28
August, 2026

A News 365Times Venture

28
Friday
August, 2026

A News 365Times Venture

ಅಲ್ಪಸಂಖ್ಯಾತರ ರಕ್ಷಣೆ, ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ-ಸಿಎಂ ಡಿ.ಕೆ ಶಿವಕುಮಾರ್

Date:

ಬೆಂಗಳೂರು, ಆಗಸ್ಟ್, 27,2026 (www.justkannada.in): “ಅಲ್ಪಸಂಖ್ಯಾತರ ರಕ್ಷಣೆ, ಅಭಿವೃದ್ಧಿ ಹಾಗೂ ಸೇವೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರ ನಿಮ್ಮ ಜೊತೆಗೆ ನಿಲ್ಲಲಿದೆ” ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ಭರವಸೆ ನೀಡಿದರು.

ಮರ್ಕಝಿ ಮಿಲಾದ್ ಒ ಸೀರತ್ ಕಮಿಟಿ ಸುನ್ನಿ ಜಮಾಯತ್ ಆಲ್ ಕರ್ನಾಟಕ ವತಿಯಿಂದ ಬೆಂಗಳೂರಿನ ವೈಎಂಸಿಎ ಮೈದಾನದಲ್ಲಿ ಬುಧವಾರ(ನಿನ್ನೆ) ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಹುಟ್ಟುವಾಗ ಯಾವ ಜಾತಿ, ಧರ್ಮದಲ್ಲಿ ಹುಟ್ಟುತ್ತೇವೆ ಎಂದು ಅರ್ಜಿ ಹಾಕುವುದಿಲ್ಲ. ಯಾವುದೇ ಧರ್ಮ ಬೇರೆಯವರಿಗೆ ತೊಂದರೆ ಮಾಡು ಎಂದು ಹೇಳುವುದಿಲ್ಲ. ಶಾಂತಿ ನೆಲೆಸಿ, ದೇಶದಲ್ಲಿ ಐಕ್ಯತೆ, ಸಮಗ್ರತೆ ಇರಬೇಕು ಎಂದು ಎಲ್ಲಾ ಧರ್ಮಗುರುಗಳು ಸಾರಿದ್ದಾರೆ” ಎಂದು ತಿಳಿಸಿದರು.

“ಪ್ರವಾದಿ ಮಹಮ್ಮದ್ ಅವರ ಜನ್ಮದಿನದಂದು ಅವರ ಸಂದೇಶ ಸ್ಮರಿಸುತ್ತಿದ್ದೇವೆ. ನಾನು ದೆಹಲಿ ಪ್ರವಾಸ ಕೈಗೊಳ್ಳಬೇಕಿತ್ತು. ನಿಮ್ಮ ಮೇಲಿನ ಅಭಿಮಾನ ಪೂರ್ವಕವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನೀವು ಶಾಂತಿ ಕಾಪಾಡುವ ಜನ. ನಿಮಗೆ ಶುಭಕೋರಲು ಬಂದಿದ್ದೇನೆ” ಎಂದರು.

“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದೆ. ಸಾಮಾಜಿಕ ನ್ಯಾಯ ಹಾಗೂ ಶಾಂತಿ ಕಾಪಾಡಲು ಬದ್ಧವಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಣ ಮೀಸಲಿಟ್ಟು ಕಾರ್ಯಕ್ರಮ ರೂಪಿಸಲಾಗಿದೆ. ನಿಮ್ಮ ಸಹಕಾರದಲ್ಲಿ ಬಲಿಷ್ಠ ಸರ್ಕಾರ ಬಂದಿದೆ. ನಮ್ಮ ಸರ್ಕಾರ ಕೂಡ ಮೊದಲ ಬಾರಿಗೆ ಈ ಸಮುದಾಯಕ್ಕೆ ಪರಿಷತ್ ಸಭಾಪತಿ ಸ್ಥಾನ, 3 ಸಚಿವ ಹಾಗೂ ಹತ್ತಾರು ನಿಗಮ ಅಧ್ಯಕ್ಷ ಸ್ಥಾನ ನೀಡಿದೆ” ಎಂದರು.

Key words: Our government, protection, development , minorities, CM, DK Shivakumar

The post ಅಲ್ಪಸಂಖ್ಯಾತರ ರಕ್ಷಣೆ, ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ-ಸಿಎಂ ಡಿ.ಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿದ್ಯಾರ್ಥಿಗಳ ಸಮಸ್ಯೆ, ಶಿಕ್ಷಣ ಸುಧಾರಣೆಗೆ ಸಂಪುಟ ಉಪಸಮಿತಿ ರಚನೆ

ಬೆಂಗಳೂರು, ಆಗಸ್ಟ್,27,2026 (www.justkannada.in):   ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ...

ರಾಜ್ಯದ 101 ತಾಲ್ಲೂಕುಗಳು ಬರಪೀಡಿತ – ಡಿಸಿಎಂ ಪರಮೇಶ್ವರ್ ಘೋಷಣೆ

ಬೆಂಗಳೂರು,ಆಗಸ್ಟ್,27,2026 (www.justkannada.in): ರಾಜ್ಯದ 101 ತಾಲ್ಲೂಕುಗಳು ಬರಪೀಡಿತ ಎಂದು ಕಂದಾಯ ಸಚಿವರೂ...

ಕಾಮಗಾರಿ ಅಪೂರ್ಣ, ಬಳಕೆಗೆ ಬಾರದ ಸ್ಥಿತಿ:  “ಸೈನಿಕ” ಉದ್ಯಾನವನಕ್ಕೆ ಗ್ರಹಣವೇ?

ಮೈಸೂರು,ಆಗಸ್ಟ್,27,2026 (www.justkannada.in): ನಗರದ ದಟ್ಟಗಳ್ಳಿ 3ನೇ ಹಂತದಲ್ಲಿ, ಮಹಾಲಕ್ಷ್ಮಿ ದೇವಸ್ಥಾನದ ಸಮೀಪದಲ್ಲಿರುವ...

ಆ.29ಕ್ಕೆ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ: ಭಾಗಿಯಾಗಲಿದ್ದಾರೆ ಸಿಎಂ ಡಿಕೆಶಿ, ಸಿದ್ದರಾಮಯ್ಯ

ಮೈಸೂರು, ಆಗಸ್ಟ್,27,2026 (www.justkannada.in): ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ...