ಮೈಸೂರು,ಆಗಸ್ಟ್,28,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದ್ದು ಈಗಾಗಲೇ ಗಜಪಡೆಯ 9 ಆನೆಗಳು ಕಾಡಿನಿಂದ ನಾಡಿಗೆ ಬಂದು ಇಂದು ಅರಮನೆ ಪ್ರವೇಶಿಸಿವೆ.
ಆಗಸ್ಟ್ 27 ರಂದು ಹುಣಸೂರು ತಾಲ್ಲೂಕು ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಇಂದು ಮೈಸೂರು ಅರಮನೆಯನ್ನ ಗಜಪಡೆಯ ಆನೆಗಳು ಪ್ರವೇಶಿಸಿದ್ದು ಪೂಜೆ ಪುನಸ್ಕಾರದ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು.
ಈ ಮಧ್ಯೆ ಇದೇ ವೇಳೆ ಶ್ರೀರಾಮ ಆನೆ ಗಾಬರಿಗೊಂಡ ಘಟನೆ ನಡೆದಿದೆ. ಶಬ್ದ ಮತ್ತು ಜನರನ್ನು ಕಂಡು ಗಾಬರಿಗೊಂಡ ಶ್ರೀರಾಮ ಆನೆ. ಬ್ಯಾರಿಕೇಡ್ ಬೀಳಿಸಿ ಕೆಲ ಕಾಲ ಆತಂಕ ಸೃಷ್ಠಿಸಿದ ಘಟನೆ ನಡೆಯಿತು.
Key words: Mysore Dasara, Shri Rama, Elephant, panics, enters, palace
The post ಮೈಸೂರು ದಸರಾ: ಅರಮನೆ ಪ್ರವೇಶ ವೇಳೆ ಗಾಬರಿಗೊಂಡ ‘ಶ್ರೀರಾಮ’ ಆನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




