ಬೆಂಗಳೂರು,ಜೂನ್,8,2026 (www.justkannada.in): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭೆ ನೀಡದಿರುವುದು ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಮಾಡಿದ ಅಪಮಾನ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಟೀಕಿಸಿದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಕೆ ಹರಿಪ್ರಸಾದ್, ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದು ಜೆಡಿಎಸ್ ಗೆ ಮಾಡಿದ ಅಪಮಾನವಲ್ಲ ರಾಜ್ಯಕ್ಕೆ ಮಾಡಿದ ಅಪಮಾನ. ಮುಂದಿನ ದಿನಗಳಲ್ಲಿ ಜನರು ಬಿಜೆಪಿಗೆ ತಕ್ಕ ಪಠ ಕಲಿಸುತ್ತಾರೆ ಎಂದರು.
ಹೆಚ್ ಡಿ ದೇವೇಗೌಡರ ಸಹಾಯದಿಂದ ಸಂಸತ್ ನಲ್ಲಿ ಬಿಜೆಪಿ ಬಿಲ್ ಪಾಸ್ ಮಾಡಿಕೊಂಡಿದೆ. ಆದರೆ ಈಗ ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ನೀಡದೇ ಅಪಮಾನ ಮಾಡಿದ್ದಾರೆ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
Key words: BJP, ticket, HD Deve Gowda, Rajyasbha, B.K. Hariprasad
The post ಹೆಚ್ ಡಿ ದೇವೇಗೌಡರಿಗೆ ಟಿಕೆಟ್ ಕೈತಪ್ಪಿದ್ದು ರಾಜ್ಯಕ್ಕೆ ಬಿಜೆಪಿ ಮಾಡಿದ ಅಪಮಾನ- ಬಿ.ಕೆ ಹರಿಪ್ರಸಾದ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




